Bellary
ಕೊಟ್ಟ ಮಾತು ತಪ್ಪಿದ ಸಂಸದ ಶ್ರೀರಾಮುಲು- ಮೋದಿ ಆದೇಶಕ್ಕೆ ಬೆಲೆಯೇ ಇಲ್ಲ

ಬಳ್ಳಾರಿ: ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಬಿಜೆಪಿ ನಾಯಕರು ಸಾರ್ವಜನಿಕ ಶೌಚಾಲಯ ಕ್ಲೀನ್ ಮಾಡೋಕೆ ಮುಂದಾಗಿರುವುದು ಕ್ರಾಂತಿಕಾರಕ ನಿರ್ಧಾರವೆಂದು ಮಾಧ್ಯಮಗಳ ಮುಂದೆ ಹೊಗಳಿದ್ದ ಬಳ್ಳಾರಿ ಸಂಸದ ಶ್ರೀರಾಮುಲು ಇಂದು ಶೌಚಾಲಯ ಕ್ಲೀನ್ ಮಾಡದೇ ನಾಪತ್ತೆಯಾಗಿದ್ದಾರೆ.
ಮೋದಿ ಹುಟ್ಟುಹಬ್ಬದ ಅಂಗವಾಗಿ ತಾವೂ ಸಹ ಬಳ್ಳಾರಿಯ ಒಂದು ಶೌಚಾಲಯ ಕ್ಲೀನ್ ಮಾಡಲು ರೆಡಿ ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಮಾಧ್ಯಮಗಳ ಮುಂದೆ ಹೇಳಿದ್ದರು. ಆದರೆ ಕೊಟ್ಟ ಮಾತನ್ನು ಒಂದೇ ದಿನದಲ್ಲಿ ಮರೆತಿರುವ ಅವರು ಇಂದು ಟಾಯ್ಲೆಟ್ ಕ್ಲೀನ್ ಮಾಡೋ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಹೀಗಾಗಿ ಶ್ರೀರಾಮುಲು ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರು ಕೊನೆಗೆ ಬಳ್ಳಾರಿಯ ಮಾಜಿ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ನಗರದ ಬಾಪೂಜಿ ನಗರದ ಸಾರ್ವಜನಿಕ ಶೌಚಾಲಯವನ್ನು ಕ್ಲೀನ್ ಮಾಡಿದ್ರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಸೋಮಶೇಖರ ರೆಡ್ಡಿ, ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಅವರ ಆಶಯದಂತೆ ಸೇವಾ ದಿವಾಸ್ ಎಂದು ಆಚರಣೆ ಮಾಡುತ್ತಿದ್ದವೆ. ಆಗಸ್ಟ್ 02 ರ ಗಾಂಧಿ ಜಯಂತಿ 15 ದಿನಗಳ ಮುಂಚೆಯೇ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿರುವುದು ಮತ್ತು ಶೌಚಾಲಯ ಕ್ಲೀನ್ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
