ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಗೆ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಗೌತಮ್ ಗಂಭೀರ್ ಸಾಥ್ ನೀಡಿದ್ದಾರೆ.
Silence of so called ‘secular liberals’ on the sickening display of hatred & death threats throughout the country against a woman who has apologised is surely DEAFENING! #LetsTolerateIntolerance
— Gautam Gambhir (@GautamGambhir) June 12, 2022
Advertisement
ಈ ಕುರಿತು #LetsTolerateintolerance ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿರುವ ಗಂಭೀರ್, ಕ್ಷಮೆಯಾಚಿಸಿದ ಮಹಿಳೆಯ ವಿರುದ್ಧ ದೇಶಾದ್ಯಂತ ದ್ವೇಷ ಮತ್ತು ಕೊಲೆ ಬೆದರಿಕೆ ಮುಂದುವರಿದಿದ್ದರೂ ಜಾತ್ಯಾತೀತ ಉದಾರವಾದಿಗಳೆಂದು ಕರೆಯಲ್ಪಡುವವರು ಮೌನವಾಗಿರುತ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪಕ್ಷಿಗಳಿಗೆ ಆಹಾರವಿಡುವ ಟ್ರೇ ಹೊಂದಿದ್ದಕ್ಕೆ 3 ವಾರದಲ್ಲಿ 3 ಬಾರಿ ವ್ಯಕ್ತಿ ಅರೆಸ್ಟ್
Advertisement
Advertisement
ಅಲ್ಲದೆ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಸತ್ಯ ಹೇಳುವುದು ಬಂಡಾಯವಾದರೆ, ನಾನು ಕೂಡಾ ಬಂಡಾಯವೇ ಎಂದು ಟ್ವೀಟ್ ಮಾಡುವ ಮೂಲಕ ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ – 11 ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
Advertisement
ಸುಮಾರು 15 ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಭಟನೆ ನಡುವೆ ಬಿಜೆಪಿ ಕಳೆದ ವಾರ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿತ್ತು. ಜೊತೆಗೆ ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಅವರನ್ನೂ ಪಕ್ಷದಿಂದ ಉಚ್ಛಾಟನೆ ಮಾಡಿತು.