ಮಡಿಕೇರಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಚಿವರ ಸಮಾರಂಭದ ಬಳಿಕ ಬೆಂಗಳೂರಿನಿಂದ ಮಡಿಕೇರಿಗೆ ವಾಪಸ್ ಆದ ಶಾಸಕ ಅಪ್ಪಚ್ಚು ರಂಜನ್ ಮೂಲ ಬಿಜೆಪಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಕೊಡಗು ಜಿಲ್ಲೆಗೆ ಒಂದು ಸ್ಥಾನ ನೀಡಬೇಕಿತ್ತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಹಾರಂಗಿ ಜಲಾಶಯದ ಬಳಿ ಮಾತಾನಾಡಿದ ಅವರು, ಜಿಲ್ಲೆಯಲ್ಲಿ ಇಬ್ಬರು ಶಾಸಕರು, ಒಬ್ಬರು ಎಂಎಲ್‍ಸಿ ಹಾಗೂ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಸೇರಿದಂತೆ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿರುವುದು ಎಂದರೆ ಕೊಡಗು ಒಂದೇ. ಆದರೆ ಯಾವುದೋ ಕಾರಣಕ್ಕೆ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕಿತ್ತು, ಅದು ಕೈಯಿ ತಪ್ಪಿ ಹೋಗಿದೆ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದರು ಪಕ್ಷದ ಹಿರಿಯಲ್ಲಿ ಆಗ್ರಹಿಸಿದ್ದೇನೆ. ಅಲ್ಲದೇ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೊಡಬಹುದು ಎಂಬ ನೀರಿಕ್ಷೆ ಇದೆ. ಈಗ 14 ಜಿಲ್ಲೆಗಳಿಗೆ ಮಂತ್ರಿಗಳು ಇಲ್ಲ. ಸಾಮಾಜಿಕ ನ್ಯಾಯದ ಸಮತೋಲನ ಕಾಪಾಡಬೇಕು. ಒಂದು ಅಥವಾ ಎರಡು ಜನಾಂಗದವರಿಗೆ 17 ಸಚಿವ ಸ್ಥಾನ ನೀಡಲಾಗಿದೆ. ಬಾಕಿ ಇರುವವರು ಏನು ಮಾಡಬೇಕು? ಅದನ್ನು ಸರಿಪಡಿಸುವ ಕೆಲಸ ಆಗಬೇಕು. ಹಿರಿಯರು ಅದನ್ನು ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.