ಮೈಸೂರು: ಬೆಂಗಳೂರು ಮೈಸೂರು ಹೆದ್ದಾರಿಯ ದುಬಾರಿ ಟೋಲ್ ವಿರೋಧಿಸಿ ಬಿಜೆಪಿ ಎಂಎಲ್‍ಸಿ ವಿಶ್ವನಾಥ್ (H.Vishwanath) ಮೈಸೂರಿನ (Mysuru) ಕೆಂಪೇಗೌಡ ವೃತ್ತದಲ್ಲಿ ಪ್ರತಿಭಟನೆ ಅರಂಭಿಸಿದ್ದಾರೆ. ದಶಪಥ ಎಕ್ಸ್‌ಪ್ರೆಸ್‌ವೇ (Expressway) ಕಾಮಗಾರಿ ಇನ್ನೂ ಸರಿಯಾಗಿ ಪೂರ್ಣಗೊಂಡಿಲ್ಲ ಈಗಲೇ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕೈಗೆ ಕಪ್ಪು ಪಟ್ಟಿ ಧರಿಸಿ, ಘೊಷಣಾ ಫಲಕಗಳನ್ನು ಹಿಡಿದು ಹೆದ್ದಾರಿ ಪಕ್ಕದಲ್ಲಿ ಬೆಂಬಲಿಗರೊಂದಿಗೆ ಕುಳಿತು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಜನರಿಗೆ ಹೊರೆಯಾಗುವಂತೆ ದುಬಾರಿ ಟೋಲ್ (Toll) ಶುಲ್ಕ ನಿಗದಿಪಡಿಸಿದೆ ಎಂದು ಶಾಂತಿಯುತ ಪ್ರತಿಭಟನೆ ಮೂಲಕ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ ಸಂಸತ್ತಿನಲ್ಲಿ ಮಾತನಾಡಲು ಬಿಡಲ್ಲ: ರಾಹುಲ್ ವಿರುದ್ದ ಬಿಜೆಪಿ ಪಟ್ಟು
ಆಪರೇಷನ್ ಕಮಲದ ಬಳಿಕ ಬಿಜೆಪಿಗೆ ಸೇರಿದ್ದ ವಿಶ್ವನಾಥ್ ಈಗಾಗಲೇ ಕಮಲ ನಾಯಕರ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ವಿಶ್ವನಾಥ್ ಕೈ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಆಲಿಕಲ್ಲು ಸಹಿತ ಮಳೆಗೆ ನೆಲಕಚ್ಚಿದ ಬೆಳೆಗಳು ಅನ್ನದಾತನಿಗೆ ನಷ್ಟವೋ ನಷ್ಟ