ಬೆಳಗಾವಿ: ಬಿಜೆಪಿ ಎಂಎಲ್‍ಸಿ ಮಹಾಂತೇಶ ಕವಟಗಿಮಠ ಮಾಧ್ಯಮಗಳಿರುವ ವಾಟ್ಸಪ್ ಗ್ರೂಪಿಗೆ ಅಶ್ಲೀಲ ಫೋಟೋಗಳನ್ನು ಹಾಕಿದ್ದಾರೆ.
ಇಂದು ಸಂಜೆ ಮಹಾಂತೇಶ ಕವಟಗಿಮಠ ಬೆಳಗಾವಿ ಮೀಡಿಯಾ ಫೋರ್ಸ್ ಗ್ರೂಪ್‍ನಲ್ಲಿ ಫೋಟೋ ಹಾಕಿ ಗ್ರೂಪಿನಲ್ಲಿರುವ ಸದಸ್ಯರಿಗೆ ಮುಜುಗರವನ್ನು ಉಂಟು ಮಾಡಿದ್ದಾರೆ.
Advertisement
ಈ ಗ್ರೂಪಿನಲ್ಲಿ ರಾಜಕಾರಣಿಗಳು, ಮಾಧ್ಯಮದ ವ್ಯಕ್ತಿಗಳು, ಅಧಿಕಾರಿಗಳು ಸೇರಿ ಸುಮಾರು 50ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದು ಸಂಜೆ ಕವಟಗಿಮಠ ಅವರ ವಾಟ್ಸಪ್ ನಂಬರ್ ನಿಂದ ಫೋಟೋಗಳು ಬಂದಿವೆ. ಈ ಫೋಟೋಗಳನ್ನು ನೋಡಿದ ಕೂಡಲೇ 30ಕ್ಕೂ ಹೆಚ್ಚು ಸದಸ್ಯರು ಕವಟಗಿಮಠ ಅವರನ್ನು ತರಾಟೆಗೆ ತೆಗೆದುಕೊಂಡು ಗ್ರೂಪ್‍ನಿಂದ ಲೆಫ್ಟ್ ಆಗಿದ್ದಾರೆ.
Advertisement
ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮಹಾಂತೇಶ ಕವಟಗಿಮಠ, ಅಚಾತುರ್ಯವಾಗಿ ಈ ಘಟನೆ ನಡೆದಿದೆ. ನಾನು ಉದ್ದೇಶ ಪೂರ್ವಕವಾಗಿ ಪೋಟೋ ಹಾಕಿಲ್ಲ. ಈ ಘಟನೆಯಿಂದ ಯಾರಿಗಾದರೂ ನೋವಾದರೆ ಕ್ಷಮೆಕೇಳುತ್ತೇನೆ ಎಂದು ತಿಳಿಸಿದ್ದಾರೆ.
Advertisement
ಇದನ್ನೂ ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್