ಬೆಂಗಳೂರು: ರಾಜ್ಯದ ಹಿತಕ್ಕಾಗಿ ಪ್ರಣಾಳಿಕೆ ಸಂಬಂಧ ವಿಶ್ವನಾಥ್ (H Vishwanath) ಜೊತೆ ಚರ್ಚೆ ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.
ಬಿಜೆಪಿ ಎಂಎಲ್‍ಸಿ ಹೆಚ್. ವಿಶ್ವನಾಥ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಶ್ವನಾಥ್ ಇಬ್ಬರು ಯೂತ್ ಕಾಂಗ್ರೆಸ್‍ನಲ್ಲಿ (Congress) ಒಟ್ಟಿಗೆ ಕೆಲಸ ಮಾಡಿದವರು. ಅನೇಕ ಸಂಪುಟದಲ್ಲಿ ಒಟ್ಟಿಗೆ ಸಚಿವರಾಗಿ ಕೆಲಸ ಮಾಡಿದ್ದೇವೆ. ಅವರಿಗೆ ಬಹಳ ಐಡಿಯಾಗಳಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿತಕ್ಕಾಗಿ ಪ್ರಣಾಳಿಕೆ ಸಂಬಂಧ ಅವರ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.
Advertisement
Advertisement
ವಿಶ್ವನಾಥ್ ಅವರು ಇಂಡಿಪೆಂಡೆಂಟ್ ಮ್ಯಾನ್ ಆಗಿದ್ದು, ಸೌಹಾರ್ದಯುತವಾಗಿ ಭೇಟಿ ಆಗಿದ್ದಾರೆ. ರಾಜಕೀಯ ಏನು ಮಾತನಾಡಿಲ್ಲ ಎಂದ ಅವರು, ಊಹಾಪೋಹಕ್ಕೆ ನಾನು ಉತ್ತರ ಕೊಡಲ್ಲ. ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ನಮ್ಮ ಲೀಡರ್‌ಶೀಪ್ ನಮ್ಮ ಸಿದ್ಧಾಂತ ಒಪ್ಪಿ ಯಾರು ಬೇಕಾದರು ಬರಬಹುದು ಎಂದು ಬೇರೆ ಪಕ್ಷದ ನಾಯಕರಿಗೆ ಆಹ್ವಾನಿಸಿದರು.
Advertisement
Advertisement
ಚುನಾವಣೆ ಸಮಯದಲ್ಲಿ ತಿಂಗಳಲ್ಲಿ ಎರಡು ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ಅವರು ತಿಂಗಳಿಗೆ ಎರಡು ಬಾರಿ ಯಾಕೆ, ರಾಜ್ಯಕ್ಕೆ ಪ್ರತಿದಿನ ಬರಲಿ. ಅಷ್ಟೇ ಯಾಕೆ ಇಲ್ಲೆ ಇರಲಿ. ಪ್ರಧಾನಿ ಮೋದಿ ಅವರಿಗೆ ಏನು ಗೌರವ ಕೊಡಬೇಕು ನಾವು ಕೊಡುತ್ತೇವೆ. ಇವಾಗ ರಾಜ್ಯದಲ್ಲಿ 40% ಕಮಿಷನ್ ಇದೆ. ಮೋದಿ ಬಂದ ಮೇಲೆ 50% ಆಗಬಹುದು ಅಷ್ಟೇ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗುಜರಾತ್‌ಗೆ ತೆರಳಲಿದ್ದಾರೆ ಬಿಎಸ್‌ವೈ
ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಹೆಣಗಾಡುತ್ತಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರು ನನ್ನ ಮೇಲಿನ ಅನುಕಂಪದಿಂದ ಹಾಗೆ ಹೇಳಿದ್ದಾರೆ. ದಿನಕ್ಕೆ ಇರೋದು 24 ಗಂಟೆ ಮಾತ್ರ ಆಗಿದ್ದರಿಂದ ಕಾಲ ಇನ್ನೊಂದಿಷ್ಟು ಹೆಚ್ಚಿದ್ದರೆ ಹೆಚ್ಚು ಕೆಲಸ ಮಾಡಬಹುದಿತ್ತು. ನಾನು ದಿನಾಲೂ ಮಲಗೋದು ರಾತ್ರಿ 2-3 ಗಂಟೆ ಆಗುತ್ತದೆ. ಹೀಗಾಗಿ ಆರೋಗ್ಯದ ಬಗ್ಗೆ ಗಮನ ಕೊಡಿ ಎಂದು ಪರಮೇಶ್ವರ್ ಹೇಳ್ತಾ ಇರ್ತಾರೆ. ಹಾಗೆ ನನ್ನ ಮೇಲಿನ ಅನುಕಂಪದಿಂದ ಹಾಗೆ ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ವಿದ್ಯಾವಂತರ‍್ಯಾರೂ ನಾಲ್ಕು ಮದುವೆಯಾಗಲ್ಲ – ನಿತಿನ್ ಗಡ್ಕರಿ