ಬೆಂಗಳೂರು: ವಿಧಾನಸಭೆ ಚುನಾವಣೆ ಬರುತ್ತಿದ್ದಂತೆ ವಲಸಿಗರ ನಡೆ ಕುತೂಹಲ ಮೂಡಿಸುತ್ತಿದೆ. ಬಿಜೆಪಿ (BJP) ಪರಿಷತ್ ಸದಸ್ಯ ಎಚ್. ವಿಶ್ವನಾಥ್ (H Vishwanath) ಸದ್ದಿಲ್ಲದೇ ಇಬ್ಬರು ಘಟಾನುಘಟಿ ಕಾಂಗ್ರೆಸ್ ನಾಯಕರನ್ನು ಬ್ಯಾಕ್ ಟು ಬ್ಯಾಕ್ ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ವಿಶ್ವನಾಥ್ ಬಿಜೆಪಿ ತೊರೆದು ಕಾಂಗ್ರೆಸ್ (Congress) ಸೇರ್ತಾರಾ ಅನ್ನೋ ಅನುಮಾನ ಹುಟ್ಟಿಸಿದೆ.
ಕಳೆದ 3 ವರ್ಷಗಳಿಂದ ಬಿಜೆಪಿಯಲ್ಲಿರುವ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಈಗ ಮರಳಿ ಗೂಡಿಗೆ ಸೇರಲು ಕಸರತ್ತು ನಡೆಸ್ತಿದ್ದಾರಾ? ಬಿಜೆಪಿ ತೊರೆದು ಮಾತೃಪಕ್ಷ ಸೇರ್ತಾರಾ ವಿಶ್ವನಾಥ್? ಈ ಅನುಮಾನ ಬರಲು ಕಾರಣ ನಿನ್ನೆ ಮತ್ತು ಇವತ್ತು ವಿಶ್ವನಾಥ್ ತೋರಿದ ನಡೆ. ವಿಶ್ವನಾಥ್ ಅವರು, ನಿನ್ನೆಯಷ್ಟೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಅವರನ್ನು ಭೇಟಿ ಮಾಡಿ ಅನೇಕರ ಹುಬ್ಬು ಮೇಲೆ ಹೋಗುವಂತೆ ಮಾಡಿದ್ದರು.
Advertisement
Advertisement
ಅದರ ಬೆನ್ನಲ್ಲೇ ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ. ಇವತ್ತು ಬೆಳಗ್ಗೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಸಿದ್ದರಾಮಯ್ಯ (Siddaramaiah) ಅವರ ಸರ್ಕಾರಿ ನಿವಾಸಕ್ಕೆ ವಿಶ್ವನಾಥ್ ಭೇಟಿ ಕೊಟ್ಟರು. ಅರ್ಧ ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರ ಜತೆ ವಿಶ್ವನಾಥ್ ಮಾತುಕತೆ ನಡೆಸಿದರು.
Advertisement
ಅಷ್ಟಕ್ಕೂ ವಿಶ್ವನಾಥ್, ಸಿದ್ದರಾಮಯ್ಯನವರ ನಡೆಯಿಂದ ಬೇಸತ್ತು ಕಾಂಗ್ರೆಸ್ ತೊರೆದು ಜೆಡಿಎಸ್ (JDS) ಸೇರಿದ್ದರು. ನಂತರ ಜೆಡಿಎಸ್‌ನಲ್ಲೂ ವೈಮನಸ್ಸು ಬಂದು ಸಮ್ಮಿಶ್ರ ಸರ್ಕಾರ ಕೆಡವಿ 16 ಜನ ವಲಸಿಗರ ಜತೆ ತಾವೂ ಬಿಜೆಪಿಗೆ ಸೇರ್ಪಡೆ ಆಗಿದ್ದರು. ಆದರೆ ಬಿಜೆಪಿಯಲ್ಲಿ ಮಾತ್ರ ಈವರೆಗೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಅವರ ಹಿರಿತನಕ್ಕೆ ಮಾನ್ಯತೆಯೂ ಸಿಗಲಿಲ್ಲ. ಸಾಲದ್ದಕ್ಕೆ ಉಪಚುನಾವಣೆಯಲ್ಲಿ ಸಹ ಸೋತರು.
Advertisement
ಬಹಳ ಕಸರತ್ತು ನಡೆಸಿ ಸಾಹಿತ್ಯ ಕೋಟಾದಿಂದ ಪರಿಷತ್‌ಗೆ ನಾಮನಿರ್ದೇಶನಗೊಂಡರು. ಆದರೆ ಬಿಜೆಪಿಯಲ್ಲಿದ್ರೂ ಅಲ್ಲಿನ ನಾಯಕರನ್ನು ಸತತವಾಗಿ ಟೀಕಿಸುತ್ತಲೇ ಬಂದರು. ಸದ್ಯ ಅವರು ಈಗ ಬಿಜೆಪಿಯಿಂದಲೂ ಮಾನಸಿಕವಾಗಿ ದೂರವಾಗಿದ್ದಾರೆ. ಇನ್ನು, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತೀರಾ ಎಂಬ ಪ್ರಶ್ನೆಗೆ ಅಸ್ಪಷ್ಟ ಉತ್ತರದ ಮೂಲಕವೇ ಪಕ್ಷ ಬಿಡುವ ಸುಳಿವನ್ನು ನೀಡಿದ್ದಾರೆ. ಇದನ್ನೂ ಓದಿ: ತವರಿಗೆ ಮತ್ತೆ ಮರಳುತ್ತಾ ಹಳ್ಳಿಹಕ್ಕಿ- ವಿಶ್ವನಾಥ್‍ಗೆ ಈಗ ಖರ್ಗೆಯೇ ಆಸರೆ!
ವಿಶ್ವನಾಥ್ ಕಾಂಗ್ರೆಸ್‌ನ ಘಟಾನುಘಟಿ ನಾಯಕರನ್ನು ಭೇಟಿ ಮಾಡಿರೋದು, ಅವರು ಪಕ್ಷಾಂತರ ಮಾಡ್ತಾರೆ ಅಂತ ದಟ್ಟವಾಗಿಯೇ ಚರ್ಚೆ ನಡೀತಿದೆ. ತಮ್ಮ ಪುತ್ರನ ರಾಜಕೀಯ ಭವಿಷ್ಯ ಗಟ್ಟಿ ಮಾಡುವ ಪ್ರಯತ್ನವೂ ಇದರಲ್ಲಿ ಸೇರಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಸೋದರ ಸಂಬಂಧಿಯ ತಲೆಯನ್ನೇ ಕಡಿದ್ರು – ಸೆಲ್ಫಿ ತೆಗೆದು ವಿಕೃತಿ ಮೆರೆದ್ರು