– ಪಾಕ್ಗೆ ಜಿಂದಾಬಾದ್ ಎಂದವನಿಗೆ ಹೊಡೆದಿದ್ದಕ್ಕೆ ಭಾರತ್ ಮಾತಾಕಿ ಜೈ ಎನ್ನುವವನ ಹತ್ಯೆ
ಚಿಕ್ಕಮಗಳೂರು: ಕ್ರಿಕೆಟ್ ಗ್ರೌಂಡ್ಗೆ ಬಂದು ಪಾಕಿಸ್ತಾನ ಜಿಂದಾಬಾದ್ ಎಂದವನ ಹೊಡೆದಿದ್ದಕ್ಕೆ ಪ್ರತಿಕಾರವಾಗಿ ಭಾರತ್ ಮಾತಾ ಕೀ ಜೈ ಎನ್ನುವವನನ್ನು ಹತ್ಯೆ ಮಾಡಲಾಗಿದೆ ಎಂದು ಎಂಎಲ್ಸಿ ಸಿ.ಟಿ ರವಿ (C.T Ravi) ಆರೋಪಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಮಂಗಳೂರಿನ (Mangaluru) ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty ) ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದೇಶದ ಹೊರಗಿನ ಶತ್ರುಗಳನ್ನು ಸೇನೆ ನೋಡಿಕೊಳ್ಳುತ್ತೆ, ಆದರೆ ಒಳಗಿನ ಶತ್ರುಗಳನ್ನ ರಾಜಕಾರಣದಿಂದ ದೂರವಿಟ್ಟು ಬೇರು ಸಹಿತ ಕಿತ್ತುಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮೂವರಿಗೆ ಚಾಕು ಇರಿತ
ಎಸ್ಡಿಪಿಐ ಮತಾಂಧತೆಯ ಹುಚ್ಚು ಹಿಡಿದ ದ್ರೋಹಿಗಳನ್ನು ಸಂಘಟಿಸೋ ಕೆಲಸ ಮಾಡುತ್ತಿದೆ. ಇವರೆಲ್ಲಾ ಮತಾಂಧತೆಯ ಹುಚ್ಚು ಹಿಡಿಸಿಕೊಂಡಿರುವ ದೇಶದ್ರೋಹಿಗಳು. ಇವರನ್ನ ಸಹಿಸೋದಾಗಲಿ, ಕ್ಷಮಿಸೋದಾಗಲಿ ಎರಡನ್ನೂ ಮಾಡಬಾರದು. ವಿಧಾನಸೌಧದ ಕಾರಿಡಾರ್ಗೆ ಬಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಾರೆ. ಇವರನ್ನು ನಿಯಂತ್ರಿಸದಿದ್ದರೆ, ಬೇರು ಸಹಿತ ಕಿತ್ತು ಹಾಕದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದ್ದಾರೆ.
ಇದನ್ನು ಸುಹಾಸ್ ಶೆಟ್ಟಿ ಕೊಲೆ ಎಂದು ನೋಡಬಾರದು. ದೇಶದ್ರೋಹಿಗಳು ದೇಶದೊಳಗೆ ನಡೆಸುತ್ತಿರುವ ಷಡ್ಯಂತ್ರ ಎಂದು ನೋಡಬೇಕು. ರಾಷ್ಟ್ರ ಭಕ್ತರನ್ನ ಯಾವ ರೀತಿ ಕೊಲ್ಲುತ್ತಿದ್ದಾರೆ ನೋಡಿ ಮುಖ್ಯಮಂತ್ರಿಗಳೆ, ನೀವು ಎಸ್ಡಿಪಿಐ ಹಾಗೂ ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆದಿದ್ದೀರಿ. ಈ ಮೂಲಕ ಅವರಿಗೆ ಅಪರಾಧ ನಡೆಸೋಕೆ ಮತ್ತಷ್ಟು ಬಲ ಕೊಡುತ್ತಿದ್ದೀರಾ? ಅವರ ಮೇಲಿದ್ದ ಕೇಸ್ ವಾಪಸ್ ಪಡೆದದಿದ್ದನ್ನು ಹಿಂತೆಗೆದುಕೊಳ್ಳಿ. ಇಲ್ಲವಾದರೆ ಈ ರೀತಿಯ ಹತ್ಯೆಗೆ ನೀವೇ ಪರೋಕ್ಷ ಕಾರಣರಾಗ್ತೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇದು ಧರ್ಮದ ನಡುವೆ ಆದ ಗಲಾಟೆ ಅಲ್ಲ: ಯು.ಟಿ.ಖಾದರ್