ಕೋಲ್ಕತ್ತಾ: ಸದನದಲ್ಲಿ ʼಮೋದಿ, ಮೋದಿʼ ಎಂದು ಬಿಜೆಪಿ ಶಾಸಕರು ಕೂಗುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾಷಣಕ್ಕೆ ಅಡ್ಡಿಪಡಿಸಿರುವ ಪ್ರಸಂಗ ನಡೆದಿದೆ.
ಸದನದಲ್ಲಿ ರಾಜ್ಯಪಾಲ ಜಗದೀಶ್ ಧನಕರ್ ಅವರ ಭಾಷಣಕ್ಕೆ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ಸಿಎಂ ಭಾಷಣಕ್ಕೆ ಅನುವು ಮಾಡಿಕೊಡದ ಬಿಜೆಪಿ ಶಾಸಕರು, ʼಮೋದಿ.. ಮೋದಿʼ ಎಂದು ಕೂಗಿ ಅಡ್ಡಿಪಡಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಮಾಫಿಯಾಗಳಿಂದ ತುಂಬಿದೆ: ಎಎಪಿ ಸಿಎಂ ಅಭ್ಯರ್ಥಿ
Advertisement
Advertisement
ಇದಕ್ಕೆ ತಿರುಗೇಟು ನೀಡಲು ಮುಂದಾದ ಮಮತಾ ಬ್ಯಾನರ್ಜಿ ಅವರು, ʼಜೈ ಬಂಗಾಳʼ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ʼಜೈ ಶ್ರೀರಾಮ್ʼ ಬದಲಿಗೆ ʼಜೈ ಸಿಯಾ ರಾಮ್ʼ ಅಂತ ಕೂಗಿ ಎಂದು ಶಾಸಕರಿಗೆ ಸಿಎಂ ತಿಳಿಸಿದ್ದಾರೆ.
Advertisement
ಮಮತಾ ಬ್ಯಾನರ್ಜಿ ಅವರು ಸದನದಲ್ಲಿ ತಮ್ಮ ಭಾಷಣ ಆರಂಭಿಸಿದ ಸಂದರ್ಭದಲ್ಲಿ ಬಿಜೆಪಿ ಶಾಸಕರು, ʻಮೋದಿ.. ಮೋದಿ, ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ʼ ಎಂಬ ಘೋಷಣೆಗಳನ್ನು ಕೂಗಿದರು. ಸುಮಾರು 40 ನಿಮಿಷಗಳ ಕಾಲ ಘೋಷಣೆಯನ್ನು ಮುಂದುವರಿಸಿದ ಘಟನೆ ನಡೆಯಿತು. ಇದನ್ನೂ ಓದಿ: UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ
Advertisement
ಇದರಿಂದ ಅಸಮಾಧಾನಗೊಂಡ ಬ್ಯಾನರ್ಜಿ ಅವರು, ತೃಣಮೂಲ ಕಾಂಗ್ರೆಸ್ ಶಾಂತಿಗಾಗಿ ಹೋರಾಡುತ್ತಿದೆ. ಆದರೆ ಕೇಸರಿ ಪಕ್ಷವು ರಾಜ್ಯದಲ್ಲಿ ಶಾಂತಿ ಕದಡಲು ಉತ್ಸುಕವಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಯವರು ವಿಧಾನಸಭಾ ಮತ್ತು ಮುನ್ಸಿಪಲ್ ಚುನಾವಣೆಯಲ್ಲಿ ಸೋತ ನಂತರವೂ ಸದನದಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ. ಅವರು ನಾಚಿಕೆಗೇಡಿನವರು. ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 109 ಸ್ಥಾನಗಳ ಪೈಕಿ 105 ಸ್ಥಾನಗಳನ್ನು ಗೆದ್ದಿದೆ ಎಂದು ಸಿಎಂ ತಿರುಗೇಟು ನೀಡಿದ್ದಾರೆ.