– ಕಾಂಗ್ರೆಸ್ ಅತೃಪ್ತ ಶಾಸಕರ ನಡೆ ಮೇಲೆ ಇನ್ನೂ ವಿಶ್ವಾಸವಿಟ್ಟ ಬಿಜೆಪಿ
ನವದೆಹಲಿ: ಗುರುಗ್ರಾಮ ರೆಸಾರ್ಟ್ ನಲ್ಲಿರುವ ಅರ್ಧಕ್ಕಿಂತ ಹೆಚ್ಚು ಶಾಸಕರನ್ನು ಲೆಮೆನ್ ಟ್ರೀ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ಸಿಎಲ್‍ಪಿ ಸಭೆಯ ಬೆಳವಣಿಗೆ ನೋಡಿಕೊಂಡು ಅವರನ್ನು ರಾಜ್ಯಕ್ಕೆ ಕರೆತರುವ ನಿರ್ಧಾರವನ್ನು ಬಿಜೆಪಿಯ ನಾಯಕರು ಕೈಗೊಂಡಿದ್ದಾರೆ.
ಸಾರಾಯ್‍ನ ಲೆಮೆನ್ ಟ್ರೀ ಹೋಟೆಲ್ ಗುರುಗ್ರಾಮದ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್‍ನಿಂದ 2 ಕಿಮೀ ದೂರದಲ್ಲಿದೆ. ಇಲ್ಲಿಗೆ ಹೊಸದಾಗಿ ಆಯ್ಕೆಯಾಗಿರುವ ಕೆಲ ಶಾಸಕರು ಸೇರಿದಂತೆ 23 ಜನ ಶಾಸಕರನ್ನು ರಹಸ್ಯವಾಗಿ ಹರ್ಯಾಣದ ಬಿಜೆಪಿ ನಾಯಕರು ಶಿಫ್ಟ್ ಮಾಡಿದ್ದಾರಂತೆ. ಈ ಮೂಲಕ ಇನ್ನೂ ಒಂದು ದಿನ ಕಾದು ನೋಡಿ ಆಪರೇಷನ್ ಕಮಲದ ಎರಡನೇ ಹಂತವನ್ನು ಯಶಸ್ವಿಯಾಗಿಸಲು ಬಿಜೆಪಿ ನಾಯಕರು ಮೆಗಾ ಪ್ಲಾನ್ ರೂಪಿಸಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
Advertisement
Advertisement
ಕಾಂಗ್ರೆಸ್ ಅತೃಪ್ತ ಶಾಸಕರ ನಡೆ ಮೇಲೆ ಬಿಜೆಪಿ ಇನ್ನೂ ವಿಶ್ವಾಸದಲ್ಲಿದ್ದು, ಒಂದು ವೇಳೆ ಕಾಂಗ್ರೆಸ್ ಶಾಸಕಾಂಗ ಸಭೆಗೆ ಅತೃಪ್ತ ಕಾಂಗ್ರೆಸ್ ಶಾಸಕರು ಗೈರಾದರೆ ಬಿಜೆಪಿ ಶಾಸಕರು ರೆಸಾರ್ಟ್ ನಲ್ಲಿ ವಾಸ್ತವ್ಯ ಮುಂದುವರಿಸಲಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿಗೆ ಬಿಜೆಪಿ ಶಾಸಕರು ವಾಪಸ್ ಆದರೂ ಅಗತ್ಯ ಬಿದ್ದರೆ ಮತ್ತೆ ರೆಸಾರ್ಟ್ ಗೆ ಸೇರಿಸಲು ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
Advertisement
ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿದ್ದು, ರಾಜಕೀಯ ಬೆಳವಣಿಗೆ ನೋಡಿಕೊಂಡು ದೆಹಲಿಯಲ್ಲಿರುವ ಶಾಸಕರಿಗೆ ಏನು ಮಾಡಬೇಕು ಎನ್ನುವ ಮಾಹಿತಿ ನೀಡುತ್ತಿದ್ದಾರೆ. ಇತ್ತ ಲೆಮೆನ್ ಟ್ರೀ ರೆಸಾರ್ಟ್ ಗೆ ಶಾಸಕ ಹರತಾಳು ಹಾಲಪ್ಪ ಆಗಮಿಸಿ ಕೈಯಿಂದ ಮುಖಮುಚ್ಚಿಕೊಂಡೇ ಕಾರಿನೊಳಗೆ ಕುಳಿತಿದ್ದರು. ಈ ಎಲ್ಲ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv