ಗಂಗಾವತಿಯಲ್ಲಿ ಬಿಜೆಪಿ ಮುಖಂಡನ ದರ್ಪ – ರಾತ್ರೋರಾತ್ರಿ ಹಳೇ ಬಸ್ ನಿಲ್ದಾಣ ನೆಲಸಮ

Public TV
1 Min Read
kpl bus stand copy

ಕೊಪ್ಪಳ: ಬಿಜೆಪಿ ಶಾಸಕನ ಆಪ್ತ ಬೆಂಬಲಿಗನೊಬ್ಬ ಮನೆಗೆ ಅಡ್ಡ ಆಗುತ್ತೆ ಅಂತ ಸರ್ಕಾರಿ ಬಸ್ ನಿಲ್ದಾಣವನ್ನೇ ಕೆಡವಿ ರಾತ್ರೋರಾತ್ರಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಇಂತಹದೊಂದು ಘಟನೆ ನಡೆದಿದೆ. ನೂತನವಾಗಿ ಹೊಸ ಬಸ್ ನಿಲ್ದಾಣ ಆರಂಭವಾಗಿದೆ. ಪಕ್ಕದಲ್ಲೇ ಇದ್ದ ಹಳೆಯ ಬಸ್ ನಿಲ್ದಾಣ ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ. ಆದರೆ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಡೆಸುಗುರು ಆಪ್ತ ಬೆಂಬಲಿಗನಾದ ಈರಣ್ಣ ಶುಕ್ರವಾರ ರಾತ್ರಿ, ಬಸ್ ನಿಲ್ದಾಣವನ್ನು ಜೆಸಿಬಿಯಿಂದ ನೆಲಸಮ ಮಾಡಿ ಈ ಸ್ಥಳದಲ್ಲಿ ಬಸ್ ನಿಲ್ದಾಣ ಇತ್ತು ಎಂಬ ಗುರುತೇ ಇಲ್ಲದಂತೆ ಮಾಡಿದ್ದಾನೆ.

vlcsnap 2018 10 06 09h35m06s871

ಶಾಸಕರ ಆಪ್ತ ಅನ್ನೋ ಕಾರಣಕ್ಕೆ ದೌರ್ಜನ್ಯದಿಂದ ಸರ್ಕಾರಿ ಬಸ್ ನಿಲ್ದಾಣವನ್ನೇ ತನ್ನ ಸ್ವಂತ ಜಾಗ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಆದರೆ ಇದಕ್ಕೂ ಮುಂಚೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಹಳೆ ಬಸ್ ನಿಲ್ದಾಣವನ್ನು ನಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಪರಿಶೀಲನೆ ಮಾಡಿಕೊಂಡು ಹೋಗಿದ್ದರು. ಆದರೆ ಈವಾಗ ಬಿಜೆಪಿ ಕಾರ್ಯಕರ್ತ ಹಾಗೂ ಶಾಸಕರ ಬೆಂಬಲಿಗ ಮಾಡಿದ ಕೆಲಸಕ್ಕೆ ಇಡೀ ಗ್ರಾಮ ಪಂಚಾಯತ್ ದಂಗಾಗಿದೆ. ಈರಣ್ಣ ವಿರುದ್ಧ ದೂರು ನೀಡುವುದಕ್ಕೆ ಗಂಗಾವತಿ ಗ್ರಾಮೀಣ ಠಾಣೆಗೆ ಹೋದರೆ ದೂರು ತೆಗೆದುಕೊಳ್ಳಲು ಪೊಲೀಸರು ನಿರಾಕರಿಸುತ್ತಿದ್ದಾರೆ ಅಂತ ಆರೋಪ ಕೇಳಿಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *