ವಿಜಯಪುರ: ತಮ್ಮ ಸ್ವಂತ ನಿವಾಸ ಕಟ್ಟಿಸೋದಕ್ಕೆ ವಿಜಯಪುರದ ಸಿಂದಗಿ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಬೂಸನೂರು ಸರ್ಕಾರಿ ಸಿಮೆಂಟನ್ನು ಪುಕ್ಸಟ್ಟೆಯಾಗಿ ದುರ್ಬಳಕೆ ಮಾಡಿಕೊಂಡಿರುವ ಆರೋಪವೊಂದು ಕೇಳಿಬಂದಿದೆ.
ವಿಜಯಪುರದ ಸಿಂದಗಿ ಪಟ್ಟಣದ ಬೂದಿಹಾಳ ಲೇಔಟ್ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡಿ, ಅದರ ಮೇಲ್ಚಾವಣಿ ಹಾಕೋದಕ್ಕೆ ಸರ್ಕಾರಕ್ಕೆ ಸೇರಿದ ಸಿಮೆಂಟನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ.
Advertisement
Advertisement
ಕರ್ನಾಟಕ ರೂರಲ್ ಇನ್ಪಾಸ್ಟ್ರೇಕ್ಚರ್ ಡೆವೆಲಪಮೆಂಟ್ ಕಾರ್ಪೋರೇಷನ್ ಲಿಮಿಟೆಡ್‍ಗೆ ಸೇರಿದ ಸುಮಾರು 2 ಲಕ್ಷ ಮೌಲ್ಯದ ಅಂದಾಜು 400 ಚೀಲ ಸಿಮೆಂಟ್ ಹಾಗೂ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನು ಬಳಸಿಕೊಂಡು ಮನೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.