ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ (BJP MLA Ticket Scam) ಪಡೆಯಲು ಹೋಗಿ 5 ಕೋಟಿ ರೂ. ಕಳೆದುಕೊಂಡಿರುವುದಾಗಿ ದೂರು ನೀಡಿರುವ ಗೋವಿಂದ ಬಾಬು ಪೂಜಾರಿ (Govind Babu Poojari) ವಿರುದ್ಧವೇ ಈಗ ಜಾರಿ ನಿರ್ದೇಶನಾಲಯದಲ್ಲಿ (ED) ದೂರು ದಾಖಲಾಗಿದೆ.
5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ. ಅವರು ನಗದು ರೂಪದಲ್ಲಿ ನೀಡಿರುವುದು ಅಪರಾಧವಾಗಿದ್ದು ಅವರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ವಕೀಲ ನಟರಾಜ ಶರ್ಮಾ (Nataraj Sharma) ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ 3ನೇ ವಂದೇ ಭಾರತ್ ರೈಲು – ಇಂದು ಪ್ರಾಯೋಗಿಕ ಸಂಚಾರ
Advertisement
Advertisement
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ನಟರಾಜ ಶರ್ಮಾ, ಗೋವಿಂದ ಪೂಜಾರಿ ಅವರು ನೀಡಿರುವ ದೂರಿನಲ್ಲಿ ನಗದು ರೂಪದಲ್ಲಿ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ಟಿಕೆಟ್‌ಗೆ 5 ಕೋಟಿ ರೂ. ನೀಡಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ. ಮುಂಬೈನಲ್ಲಿ (Mumbai) ವ್ಯವಹಾರ ಮಾಡಿಕೊಂಡಿದ್ದ ಅವರಿಗೆ 5 ಕೋಟಿ ರೂ. ಹಣವನ್ನು ನಗದು ರೂಪದಲ್ಲಿ ನೀಡಬಾರದು ಎನ್ನುವುದು ಅವರಿಗೆ ತಿಳಿದಿರಬೇಕಿತ್ತು. ಇದು ಹವಾಲಾ ಹಣ ಎಂಬ ದೃಷ್ಟಿಯಿಂದ ದೂರು ನೀಡಿದ್ದೇನೆ ಎಂದು ತಿಳಿಸಿದರು.
Advertisement
ಈ ವಂಚನೆ ಪ್ರಕರಣದಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕಿತ್ತು. ಸಾಲವಾಗಿಯೇ ಹಣ ಪಡೆದಿದ್ದರೂ ಸಾಲ ಪಡೆದ ಉದ್ದೇಶವೇ ಬೇರೆಯಾಗಿದೆ. ನಗದು ರೂಪದಲ್ಲಿ ಇಷ್ಟೊಂದು ವ್ಯವಹಾರ ನಡೆಸಿದ್ದು ಹೇಗೆ? ಇಡಿ ಈ ವಿಚಾರವಾಗಿ ತನಿಖೆ ಮಾಡಬೇಕೆಂದು ಕೋರಿ ದೂರು ನೀಡಿದ್ದೇನೆ ಎಂದು ತಿಳಿಸಿದರು.
Advertisement
Web Stories