ವಿಚಾರವಾದಿಗಳ ಬಗ್ಗೆ ಬಿಜೆಪಿ ಶಾಸಕ ಸುರೇಶ್‍ಕುಮಾರ್ ವಿವಾದಾತ್ಮಕ ಟ್ವೀಟ್

Public TV
1 Min Read
SURESH KUMAR

ಬೆಂಗಳೂರು: ಹೋರಾಟಗಾರ್ತಿ, ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯಾಗಿರೋ ಹೊತ್ತಲ್ಲೇ ಬಿಜೆಪಿ ಶಾಸಕ ಸುರೇಶ್‍ಕುಮಾರ್  ಟ್ವೀಟ್ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಆಧಾರವಿಲ್ಲದೆ ಯಾವುದನ್ನು ನಂಬದ ಇವರು ಯಾವುದೇ ಆಧಾರವಿಲ್ಲದಿದ್ದರೂ ತಮಗಾಗದವರನ್ನು ಅಪರಾಧಿ ಎಂದು ತೀರ್ಮಾನಿಸಿ ತೀರ್ಪು ಕೊಟ್ಟೇ ಬಿಡುತ್ತಾರೆ. ಏಕೆಂದರೆ ಇವರು ವಿಚಾರವಾದಿಗಳು ಅಂತ ವಿಚಾರವಾದಿಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 7.30 ರ ಸುಮಾರಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಸದ್ಯ ಗೌರಿ ಲಂಕೇಶ್ ಅವರ ಮೃತದೇಹವನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಗೌರಿ ಮನೆಯ ಸಿಸಿಟಿವಿ ಹಾಗೂ ಸ್ಥಳಿಯ ಸಿಸಿಟಿವಿಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆಗಂತುಕರು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದ್ದು, ಹಂತಕರ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

67662 hdonvrjkuu 1504626808

gouri cctv 1

gowri lankesh 1

gowri lankesh 4

gowri lankesh 5

gowri lankesh 6

vlcsnap 2017 09 05 21h46m19s139

GAURI LANKESH 8 1

gauri lankesh police 1

gauri lankesh police 2

gauri lankesh police 3

Share This Article
Leave a Comment

Leave a Reply

Your email address will not be published. Required fields are marked *