ಮಾಜಿ ಸಿಎಂ ಸಂಪರ್ಕಕ್ಕೆ ಸಿಗ್ತಿಲ್ಲ-ಕೇಂದ್ರ ಸಚಿವರ ಜೊತೆ ದಿನವಿಡೀ ಕಾಂಗ್ರೆಸ್ ಶಾಸಕರ ಸುತ್ತಾಟ!

Public TV
1 Min Read
bjp anand singh

ಕೊಪ್ಪಳ: ಸಚಿವ ಸ್ಥಾನ ಸಿಗದೇ ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅಥವಾ ಯಾವುದೇ ಕಾಂಗ್ರೆಸ್ ನಾಯಕರಿಗೆ ಮೊಬೈಲ್‍ನಲ್ಲೂ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದ್ರೆ ದಿನವಿಡೀ ಕೇಂದ್ರ ಸಚಿವರ ಜೊತೆಯಲ್ಲಿಯೇ ಸುತ್ತಾಟ ನಡೆಸುತ್ತಿದ್ದಾರೆ.

ಸೋಮವಾರ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಜೊತೆ ಹಂಪಿಯಲ್ಲಿ ಆನಂದ್ ಸಿಂಗ್ ಸುತ್ತಾಡಿದ್ದರು. ಇಂದು ಪಿಯೂಷ್ ಗೋಯೆಲ್ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಆನಂದ್ ಸಿಂಗ್ ಪತ್ನಿ ಮತ್ತು ಅಳಿಯ ಇಂದೂ ಕೂಡ ಗೋಯೆಲ್ ಸಾಹೇಬ್ರಿಗೆ ಸಾಥ್ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ನೋಡಿದರೆ ಆನಂದ್ ಸಿಂಗ್ ಅವರು ಬಿಜೆಪಿಯತ್ತ ಮುಖ ಮಾಡಿದ್ರಾ ಅನ್ನೋ ಅನುಮಾನ ಬಾರದೇ ಇರದು.

Piyush Goyal

ಇತ್ತ ಕೈ ನಾಯಕರ ವಿರುದ್ಧ ಸಿಡಿದೆದ್ದಿರೋ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಬಿಜೆಪಿಯತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಾತುಗಳಿಗೆ ಪೂರಕ ಎಂಬಂತೆ ಇಂದು ಬೆಳಗ್ಗೆ ರಾಮಲಿಂಗಾ ರೆಡ್ಡಿ ಅವರನ್ನು ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಭೇಟಿ ಮಾಡಿದ್ದಾರೆ. ಇದಕ್ಕೂ ಮೊದಲು ಶಾಸಕರಾದ ಸತೀಶ್ ರೆಡ್ಡಿ ಮತ್ತು ಎಂ.ಕೃಷ್ಣಪ್ಪ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದರು. ಬಿಜೆಪಿ ಸರಣಿ ಶಾಸಕರು ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡುತ್ತೀರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Ramaliga Reddy

ಸಂಪುಟ ಪುನಾರಚನೆಯ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಈ ಸಮಯದಲ್ಲಿಯೇ ಸರ್ಕಾರ ಬೀಳಿಸಲು ಬಿಜೆಪಿ ರಣತಂತ್ರ ರಚಿಸಲು ಮುಂದಾಗುತ್ತಿದೆ. ಬಿಜೆಪಿ ಯಾವ ನಾಯಕರು ಬಹಿರಂಗವಾಗಿ ನಾವು ಆಪರೇಷನ್ ಕಮಲಕ್ಕೆ ಮುಂದಾಗಿಲ್ಲ. ಒಂದು ವೇಳೆ ಅವರಾಗಿಯೇ ಪಕ್ಷಕ್ಕೆ ಬಂದ್ರೆ ಸ್ವಾಗತಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದ್ರೆ ತೆರೆಯ ಹಿಂದೆ ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂಬುದು ಪಕ್ಷದ ಇನ್ ಸೈಡ್ ಸ್ಟೋರಿ ಎಂಬಂತೆ ಭಾಸವಾಗ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article