ಪಾಟ್ನಾ: ಶಿಕ್ಷಣ ಕೇಂದ್ರವನ್ನು ಧಾರ್ಮಿಕ ಆಚರಣೆಗಳ ಸ್ಥಳವನ್ನಾಗಿ ಮಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ಬಿಹಾರದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾನಿಲಯದಲ್ಲಿ ಏಪ್ರಿಲ್ 26 ರಂದು ಆಯೋಜಿಸಲಾದ ಆಜಾನ್ ಮತ್ತು ಇಫ್ತಾರ್ ಕೂಟಕ್ಕೆ ಬಿಜೆಪಿ ಶಾಸಕ ಸಂಜಯ್ ಸರೋಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದೊಂದು ಗಂಭೀರ ವಿಚಾರ. ಶಿಕ್ಷಣ ಸಂಸ್ಥೆಗಳನ್ನು ಧಾರ್ಮಿಕ ಸ್ಥಳಗಳನ್ನಾಗಿ ಪರಿವರ್ತಿಸುವುದನ್ನು ಸಹಿಸಲಾಗುವುದಿಲ್ಲ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದು ವಿಶ್ವವಿದ್ಯಾನಿಲಯ ಉಪಕುಲಪತಿ ಹಾಗೂ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್ ವಿರುದ್ಧ ಸಂಜಯ್ ಸರೋಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ
ಇದಕ್ಕೆ ಪ್ರತಿಕ್ರಿಯಿಸಿದ ಮುಷ್ತಾಕ್ ಅಹ್ಮದ್ ಅವರು, ಇಫ್ತಾರ್ ಕೂಟವನ್ನು ವಿಶ್ವವಿದ್ಯಾಲಯದ ಆಡಳಿತ ಆಯೋಜಿಸಿಲ್ಲ. ವಿಶ್ವವಿದ್ಯಾಲಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಕಾರ್ಯಕ್ರಮವನ್ನು ಕೆಲವು ವಿದ್ಯಾರ್ಥಿಗಳು ಆಯೋಜಿಸಿದ್ದರು. ತಪ್ಪು ಮನಸ್ಥಿತಿ ಹೊಂದಿರುವ ಜನರು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಧ್ಯಾಪಕ ಅಮಾನತು