– ಶಾಸಕರ ಆರೋಗ್ಯ ಸ್ಥಿರವಾಗಿದೆ: ವೈದ್ಯರ ಮಾಹಿತಿ
ಬೆಂಗಳೂರು: ಮೊಟ್ಟೆ ದಾಳಿಗೆ ಒಳಗಾಗಿದ್ದ ಶಾಸಕ ಮುನಿರತ್ನ ಅವರ ಆರೋಗ್ಯ ಸ್ಥಿರವಾಗಿದೆ. ಇಂದು ಆಸ್ಪತ್ರೆಯಲ್ಲೇ ಇರುವಂತೆ ಶಾಸಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.
ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆ 24 ಗಂಟೆ ಅಬ್ಸರ್ವೇಶನ್‌ನಲ್ಲಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ಬಹುತೇಕ ನಾಳೆ ಮುನಿರತ್ನ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
ಸರ್ಜನ್ ನವೀನ್ ಅವರಿಂದ ಶಾಸಕರಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಮುನಿರತ್ನ ಆರೋಗ್ಯ ಸ್ಥಿರವಾಗಿದೆ. ಅವರ ತಲೆಯ ಹಿಂಭಾಗಕ್ಕೆ ಪೆಟ್ಟು ಬಿದ್ದಿದೆ ಎಂದು ವೈದ್ಯರು ಮಾಹಿತಿ ತಿಳಿಸಿದ್ದಾರೆ.
ಮತ್ತೊಂದೆಡೆ ಮುನಿರತ್ನ ಅವರಿಂದ ಪೊಲೀಸರು ಘಟನೆ ಕುರಿತು ಸ್ಟೇಟ್‌ಮೆಂಟ್ ಪಡೆದುಕೊಂಡಿದ್ದಾರೆ.