ಮೈಸೂರು: ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿ ನಾಲಗೆ ಹರಿಬಿಟ್ಟಿದ್ದಾರೆ.
ಮೈಸೂರಿನಲ್ಲಿ ನಗರ ಪ್ರದಕ್ಷಿಣೆ ವೇಳೆ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ಧ ಪ್ರಯೋಗ ಮಾಡಿದ್ದಾರೆ. ಅಧಿಕಾರಿಗಳು ಕಳ್ ನನ್ ಮಕ್ಳು. ಅವರು ನೆಟ್ಟಗೆ ಕೆಲಸ ಮಾಡಿದ್ದರೆ ಯಾಕೆ ಹೀಗಾಗ್ತಿತ್ತು ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.
ಈ ವೇಳೆ ಅಧಿಕಾರಿಗಳ ಪರ ಮಾತನಾಡಿದ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಸತೀಶ್ ಅವರಿಗೂ ಸುಮ್ನಿರಿ, ನೀವ್ಯಾಕೆ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತೀರಿ ಎಂದು ಗರಂ ಆದರು.
https://www.youtube.com/watch?v=o7Ak2ZYfbCI
ಶಾಸಕ ನಾಗೇಂದ್ರ ಅವರಿಗೆ ಸಚಿವ ಜಿ.ಟಿ.ದೇವೇಗೌಡ ಕೂಡ ಸಾಥ್ ನೀಡಿದ್ದು, ಗ್ರಾಮಾಂತರ ಬಸ್ ನಿಲ್ದಾಣ ಎದುರಿನ ಶೌಚಗೃಹ ಪರಿಶೀಲಿಸಿದ್ದಾರೆ. ಶೌಚಗೃಹದ ಗಬ್ಬುನಾತ, ದುಸ್ಥಿತಿ ಕಂಡು ಕೆಂಡಾಮಂಡಲರಾದ ಸಚಿವ ಜಿಟಿಡಿ, ಮಹಾನಗರ ಪಾಲಿಕೆ ಎಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಅಮಾನತು ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.