ಲಕ್ನೋ: ಮುಂದಿನ ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಮುಜಾಫರ್‌ನಗರದಲ್ಲಿ ಪ್ರಚಾರ ತೆರಳಿದ್ದ ಬಿಜೆಪಿ ಶಾಸಕನನ್ನು ಗ್ರಾಮಸ್ಥರು ಓಡಿಸಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ಚುನಾವಣೆಗೆ ಪ್ರಚಾರ ನಡೆಸಲು ಮುನ್ವಾರ್‌ಪುರ ಗ್ರಾಮಕ್ಕೆ ತೆರಳಿದ್ದರು. ಆದರೆ ಶಾಸಕರ ಕಾರನ್ನು ಗ್ರಾಮಸ್ಥರು ಅರ್ಧದಲ್ಲೇ ತಡೆದಿದ್ದಾರೆ. ಅಲ್ಲದೇ ಶಾಸಕರ ವಿರುದ್ಧ ಘೋಷಣೆ ಕೂಗಿ ವಾಪಸ್ ಹೋಗುವಂತೆ ಹೇಳಿದ್ದಾರೆ. ಇದನ್ನೂ ಓದಿ: ಪರಿಕ್ಕರ್ ಪುತ್ರನನ್ನು ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್
ಗ್ರಾಮಸ್ಥರ ಪ್ರತಿರೋಧದಿಂದಾಗಿ ಶಾಸಕರು ಬೇರೆ ಆಯ್ಕೆಯಿಲ್ಲದೇ ಕಾರು ಹತ್ತಿ ವಾಪಸ್ ಬಂದಿದ್ದಾರೆ. ಈ ಪ್ರಸಂಗದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸೈನಿ, ಗ್ರಾಮಸ್ಥರ ಗುಂಪಿನಲ್ಲಿ ಕೆಲವರು ಮದ್ಯಪಾನ ಮಾಡಿದ್ದರು. ಆದ್ದರಿಂದ ನಾನು ಪ್ರಚಾರ ನಡೆಸದೇ ವಾಪಸ್ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: UP Election: ಗೋರಖ್‌ಪುರ ಕ್ಷೇತ್ರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಸ್ಪರ್ಧೆ
ವಿಕ್ರಮ್ ಸೈನಿ ವಿವಾದಾತ್ಮಕ ಹೇಳಿಕೆಗಳಿಂದಲೇ ಫೇಮಸ್ ಆದವರು. ಭಾರತದಲ್ಲಿ ಅಸುರಕ್ಷಿತ ವಾತಾವರಣ ಇದೆ ಎನ್ನುವವರಿಗೆ ಬಾಂಬ್ ಹಾಕುವುದಾಗಿಯೂ, ನಮ್ಮ ದೇಶವನ್ನು ಹಿಂದೂಸ್ತಾನ್ ಎನ್ನಲಾಗುತ್ತೆ. ಇದು ಹಿಂದೂಗಳ ರಾಷ್ಟ್ರ, ಗೋಹತ್ಯೆ ಮಾಡುವವರ ಕೈಕಾಲು ಮುರಿಯಬೇಕು ಎಂದು ಹೇಳಿಕೆಗಳನ್ನು ನೀಡಿದ್ದರು.