– ಯತ್ನಾಳ್ ಹೆಗಲ ಮೇಲೆ ಗನ್ ಇಟ್ಟು ಗುಂಡು ಹಾರಿಸುವ ಕೆಲಸ ಮಾಡ್ತಿದ್ದಾರೆ ಎಂದ ಶಾಸಕ
ಬೆಂಗಳೂರು: ನನ್ನ ವಿರುದ್ಧ ಏನೇ ದಾಖಲೆ, ವೀಡಿಯೋಗಳಿದ್ದರೂ ಒಂದು ಕ್ಷಣವೂ ಯೋಚನೆ ಮಾಡದೆ, ತಕ್ಷಣ ಬಿಡುಗಡೆ ಮಾಡಲಿ. ಶುಭ ಮುಹೂರ್ತಕ್ಕೆ ಕಾಯುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸವಾಲ್ ಹಾಕಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಕ್ರಮಕ್ಕೆ ಆಲೋಚಿಸಿ ಬೆಂಗಳೂರಿನಲ್ಲಿರುವ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರ ನಿವಾಸದಲ್ಲಿಂದು ಸಮಾಲೋಚನ ಸಭೆ ನಡೆಸಲಾಯಿತು. ಸಭೆಯ ಬಳಿಕ ವಿಪಕ್ಷಗಳೊಂದಿಗೆ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಸಾಕ್ಷ್ಯಾಧಾರ ಇದೆ, ಬಿಡುಗಡೆ ಮಾಡ್ಲಾ? ಅನ್ನೋ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: `ನಮ್ಮ ಮೆಟ್ರೋ’ದಿಂದ ಬಿಗ್ ಅಪ್ಡೇಟ್ – ಒಂದೂವರೆ ವರ್ಷದೊಳಗೆ ಬರಲಿದ್ಯಾ ಹೆಬ್ಬಾಳ-ಏರ್‌ಪೋರ್ಟ್ ಮೆಟ್ರೋ?
Advertisement
Advertisement
ಕಾಂಗ್ರೆಸ್ ಹೊಂದಾಣಿಕೆ ಅವಶ್ಯಕತೆಯಿಲ್ಲ:
ಯತ್ನಾಳ್ ಒಂದು ಕ್ಷಣವೂ ಯೋಚನೆ ಮಾಡೋದು ಬೇಡ. ನನ್ನ ವಿರುದ್ಧ ದಾಖಲೆ, ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ. ಕಾಂಗ್ರೆಸ್ (Congress) ಹೊಂದಾಣಿಕೆ ನನಗೆ ಅವಶ್ಯಕತೆ ಇಲ್ಲ. ಆದರೆ ಹೊಂದಾಣಿಕೆ ರಾಜಕಾರಣ ಅಂತಾ ಪಕ್ಷ ಸಂಘಟನೆಗೆ ಪೆಟ್ಟು ಕೊಡ್ತಿದ್ದಾರೆ. ಅವರಿಗೆ ಯಾವುದೇ ರೀತಿಯಲ್ಲಿ ಒಳ್ಳೆಯದು ಆಗಲ್ಲ. ಆದರೆ ಬಿಗಿ ಕ್ರಮ ಆಗಬೇಕು ಅನ್ನೋದು ಕಾರ್ಯಕರ್ತರ ಅಪೇಕ್ಷೆ. ವಿಜಯೇಂದ್ರ ಬದಲಾವಣೆ ಮಾಡಲಿ ಅಂತ ಅವರ ಜೊತೆ ಇನ್ನೂ ಹತ್ತು ಜನರನ್ನು ಸೇರಿಸಿಕೊಳ್ಳಲಿ, ನನಗೇನು ತೊಂದರೆ ಇಲ್ಲ. ಈಗ್ಲೂ ನಾನು ಮನವಿ ಮಾಡುತ್ತೇನೆ ಪಕ್ಷದ ಕಾರ್ಯಕರ್ತರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬಿಎಸ್‌ವೈ ಕುಟುಂಬ ದೇಶದಲ್ಲಿಯೇ ಪ್ರಾಮಾಣಿಕ ಕುಟುಂಬ, ವಿಜಯೇಂದ್ರ ಅಪ್ಪಟ ಚಿನ್ನ – ಯತ್ನಾಳ್ ವ್ಯಂಗ್ಯ
Advertisement
Advertisement
ಚಾಡಿ ಹೇಳೋ ಅವಶ್ಯಕತೆ ನನಗಿಲ್ಲ:
ದೆಹಲಿಯಲ್ಲಿ ವರಿಷ್ಠರ ಭೇಟಿ ವಿಚಾರ ಕುರಿತು ಮಾತನಾಡಿ, ರಾಜ್ಯದಲ್ಲಿ ಸಂಘಟನಾ ಪರ್ವ ನಡೀತಿದೆ. ನಿನ್ನೆ ಪಕ್ಷದ ವರಿಷ್ಠರ ಭೇಟಿ ಮಾಡಿದ್ದೇನೆ. ಮೂರು ಕ್ಷೇತ್ರಗಳ ಹಿನ್ನಡೆ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ತಿಳಿಸಿದ್ದೇನೆ. ಆದರೆ ಯಾರ ವಿರುದ್ಧ ಚಾಡಿ ಹೇಳೋದು, ಅವರನ್ನು ಉಚ್ಚಾಟನೆ ಮಾಡಿ ಅಂತ ಹೇಳೋದೋ ನಾನು ಹೇಳಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ. ಆದ್ರೆ ಯತ್ನಾಳ್ ವಿರುದ್ಧ ಕ್ರಮ ಆಗಬೇಕು ಅಂತ ಕಾರ್ಯಕರ್ತರ ಅಭಿಪ್ರಾಯ ಇದೆ. ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಪ್ರತ್ಯೇಕವಾಗಿ ಹೋಗ್ತಿದ್ದಾರೆ. ಕೆಲವರು ಯತ್ನಾಳ್ ಹೆಗಲ ಮೇಲೆ ಗನ್ ಇಟ್ಟುಕೊಂಡು ಗುಂಡು ಹಾರಿಸುವ ಕೆಲಸ ಮಾಡ್ತಿದ್ದಾರೆ. ಆದ್ರೆ ಅವರದ್ದು ಏನೇ ಉದ್ದೇಶ ಇದ್ದರೂ ಸಫಲ ಆಗಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು, ಆದರೆ ಅವರಿಗೆ ಅರ್ಥ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಯತ್ನಾಳ್ ಅವರು ಯಡಿಯೂರಪ್ಪ ಮತ್ತೆ ವಿಜಯೇಂದ್ರಗೆ ಬೈಯ್ಯೋದೆ ಒಂದು ಪದವಿ ಅಂದ್ಕೊಂಡಿದ್ದಾರೆ. ಇವತ್ತು ಮಾಜಿ ಶಾಸಕರು ಬಂದಿದ್ದರು, ಇದರ ಬಗ್ಗೆ ಹೇಳಿದ್ದಾರೆ. ನಾನು ಅವರಿಗೆ ಇದನ್ನು ಬದಿಗೊತ್ತಿ, ಪಕ್ಷ ಸಂಘಟನೆ ಮಾಡಿ ಅಂತಷ್ಟೇ ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರುನಾಡಿಗೆ ಮತ್ತೊಂದು ಗರಿ: ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ವಿಜಯಪುರದ ಸಮೈರಾ