ಕೊಪ್ಪಳ: ರಾಜ್ಯದಲ್ಲಿ ಚುನಾವಣೆಯ (Election) ಕಾವು ದಿನದಿಂದ ದಿನಕ್ಕೆ ಕಾವು ಹೆಚ್ಚುತ್ತಿದ್ದು, ಈ ನಡುವೆ ಶಾಸಕರೊಬ್ಬರು ಎದುರಾಳಿ ಅಭ್ಯರ್ಥಿಯ ಮೇಲೆ ದರ್ಪ ಮೆರೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಯ ಮೇಲೆ ಬಿಜೆಪಿ (BJP) ಶಾಸಕ ಬಸವರಾಜ ದಡೇಸೂಗುರು (Basavaraj Dadesugur) ಕನಕಗಿರಿ (Kanakagiri) ತಹಶೀಲ್ದಾರ್ ಕಚೇರಿಯಲ್ಲಿ ದರ್ಪ ಮೆರೆದಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಧರ್ಮಣ್ಣ ಎಂಬವವರರು ನಾಮಪತ್ರ ಸಲ್ಲಿಸಲು ತಹಶಿಲ್ದಾರ್ ಕಚೆರಿಗೆ ತೆರಳಿದ್ದ ವೇಳೆ ಶಾಸಕ ಏಕಾಏಕಿ ಗಲಾಟೆಗೆ ಮುಂದಾಗಿದ್ದಾರೆ. ಶಾಸಕ ಗಲಾಟೆಗೆ ಮುಂದಾಗುತ್ತಿದ್ದಂತೆ ಜೊತೆಯಲ್ಲಿದ್ದ ಬೆಂಬಲಿಗರು ಅವರನ್ನು ಸಮಾಧಾನ ಪಡೆಸಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸಿದರೆ ಮತ ವಿಭಜನೆಯಾಗುತ್ತದೆ ಎಂಬ ಭೀತಿಯಲ್ಲಿ ಶಾಸಕ, ಅಭ್ಯರ್ಥಿಯನ್ನು ಹೆದರಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ಅರಕಲಗೂಡಿನಲ್ಲಿ ದಿಢೀರ್ ಬೆಳವಣಿಗೆ – ಕೈ ಟಿಕೆಟ್ ಆಕಾಂಕ್ಷಿ ಬಿಜೆಪಿ ಅಭ್ಯರ್ಥಿ?
ಶಾಸಕ ದರ್ಪ ಮೆರೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶಾಸಕರ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅತೀಕ್ ಅಹ್ಮದ್ 1,169 ಕೋಟಿ ರೂ. ಒಡೆಯ- ಹುಡುಕಿದಷ್ಟು ಸಿಗುತ್ತಿದೆ ಗ್ಯಾಂಗಸ್ಟರ್‌ನ ಆಸ್ತಿ