– ನೀವು ರಾಜಕಾರಣಕ್ಕೆ ಯಾಕೆ ಸೇರಿದ್ರಿ, ನಿಮ್ಮದೇನಿತ್ತು ಇಲ್ಲಿ ಮೂಲ
– ಎಚ್‍ಡಿಕೆಗೆ ಯತ್ನಾಳ್ ಪ್ರಶ್ನೆ?
ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದಾರೆ.
ದೊರೆಸ್ವಾಮಿ ಪಾಕ್ ಏಜೆಂಟ್ ಎಂಬ ಹೇಳಿಕೆಯನ್ನು ಸಾಣೆಹಳ್ಳಿ ಪಂಡಿತರಾದ್ಯ ಶ್ರೀಗಳು ಸಹ ಖಂಡಿಸಿದ್ದರು. ಹಿರಿಯ ಹೋರಾಟಗಾರರ ಬಗ್ಗೆ ಹಲವರು ಮಾತನಾಡಿದ್ದಾರೆ. ಹೀಗಾಗಿ ಆನೆ ನಡೆಯುವಾಗ ನಾಯಿಗಳು ಬೊಗಳಿದರೆ ಏನೂ ಆಗಲ್ಲ ಎಂದು ಸಾಣೇಹಳ್ಳಿ ಶ್ರೀ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್, ದೊರೆಸ್ವಾಮಿ ಆನೆಯೋ, ಹಂದಿನೋ ಯಾರಿಗೆ ಗೊತ್ತು ಎಂದು ಹೇಳಿಕೆ ನೀಡಿದ್ದಾರೆ.
Advertisement
Advertisement
ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕುಮಾರಸ್ವಾಮಿ ಹುಟ್ಟಿದ್ರಾ? ಅಷ್ಟೇ ಅಲ್ಲದೆ ಊಟಕ್ಕೆ ಗತಿ ಇಲ್ಲದವರು ಸೇನೆಗೆ ಸೇರ್ತಾರೆ ಎಂದು ಹೇಳಿದ್ದ ಅವರಿಗೆ ನಾಚಿಕೆ ಆಗಬೇಕು. ಹಾಗಾದರೆ ನೀವು ಯಾಕೆ ರಾಜಕಾರಣಕ್ಕೆ ಸೇರಿದ್ರಿ? ನಿಮ್ಮದೇನಿತ್ತು ಮೂಲ? ನಿಮ್ಮ ತಂದೆಯವರು ವರ್ಕ್ ಇನ್ಸ್‌ಪೆಕ್ಟರ್ ಇದ್ರಾ? ನಿಮಗೆ ಸಾವಿರಾರು ಕೋಟಿ ಹೇಗೆ ಬಂತು? ನನ್ನ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.
Advertisement
ನಿಮ್ಮ ತಂದೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವಗೌಡ ಅವರೇನದಾರು ಸ್ವಾತಂತ್ರ್ಯ ಸೈನಿಕರೇ? ರಾಜಕಾರಣಿಗಳಲ್ಲಿ ಹೊಂದಾಣಿಕೆ ಇರಬಹುದು. ಆದ್ರೆ ಯತ್ನಾಳ್ ಜೊತೆ ಯಾರಿಗೂ ಹೊಂದಾಣಿಕೆ ಆಗಲು ಸಾಧ್ಯವಿಲ್ಲ ಎಂದು ಗುಡುಗಿದರು.
Advertisement
ವೀರ ಸಾವರ್ಕರ್ ಅವರಷ್ಟು ದೊರೆಸ್ವಾಮಿ ಅವರು ಲಾಠಿ ಏಟು ತಿಂದಿದ್ದಾರಾ? ಅವರು ಯಾವ ವಯಸ್ಸಿನಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿರಬಹುದು ಎಂದು ದೊರೆಸ್ವಾಮಿ ಅವರ ವಿರುದ್ಧೆ ಮತ್ತೊಮ್ಮೆ ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ, ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮೊದಲು ಕ್ಷಮೆ ಬೇಡಲಿ. ರಾತ್ರಿ ಒಂದು, ಬೆಳಗ್ಗೆ ಒಂದು ಮಾತನಾಡುವ ಚಟ ಇರುವ ರಾಜಕಾರಣಿ ನಾನಲ್ಲ ಎಂದು ಹೇಳಿದರು.
ಗೂಡ್ಸೆ ಸಂತತಿಯ ಯತ್ನಾಳ್ ಸದನದಲ್ಲಿ ಇರಲು ನಾಲಾಯಕ್ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕರು, ರಮೇಶ್ ಕುಮಾರ್ ಅವರ ಇತಿಹಾಸ ಏನು, ಎಷ್ಟು ಭೂ ಕಬಳಿಕೆ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಬಹಳ ಸಾಚಾ ಎಂಬಂತೆ ಮಾತನಾಡುತ್ತಾರೆ. ಸತ್ಯಹರಿಶ್ಚಂದ್ರನ 19ನೇ ಸಂತತಿಯವರಂತೆ ಮಾತನಾಡುತ್ತಾರೆ. ಮೊದಲು ಅವರು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ ಎಂದು ಗುಡುಗಿದರು.
ನನ್ನ ಬಗ್ಗೆ ಮಾತಾಡುವ ನೈತಿಕತೆ ರಮೇಶ್ ಕುಮಾರ್ ಅವರಿಗೆ ಇಲ್ಲ. ಹಾಗೆಯೇ ನನ್ನ ಮೇಲೆ ನೀರಾವರಿ ಹೋರಾಟದ 23 ಕೇಸ್ ಗಳಿವೆಯೇ ಹೊರತು, ಭೂ ಕಬಳಿಕೆ, ಅತ್ಯಾಚಾರ, ನಕಲಿ ನೋಟ್ ಮಾಡಿರುವ ಪ್ರಕರಣಗಳಿಲ್ಲ. ರಮೇಶ್ ಕುಮಾರ್ ಅವರಿಂದ ಯಾವುದೇ ಆದರ್ಶ ತತ್ವ ಕಲಿಯುವ ಅವಶ್ಯಕತೆಯಿಲ್ಲ. ಯಾಕಂದ್ರೆ ನಾನು ಆರ್‍ಎಸ್‍ಎಸ್ ಅವರು ಏನ್ ಮಾಡ್ತಾರೆ ಎಂದು ಪ್ರಶ್ನಿಸಿದರು.
ನಾನೇನು ದೇಶ ವಿರೋಧಿ ಅಲ್ಲ, ಪಾಕಿಸ್ತಾನ್ ಏಜೆಂಟ್ ಕೂಡ ಅಲ್ಲ. ದೇಶದ ಪರ ಮಾತನಾಡುತ್ತೇನೆ. ಯಾರ ಭಯವೂ ನನಗಿಲ್ಲ. ಪೊಲೀಸರು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರೆ ಎರಡನೇ ದೆಹಲಿ ಮಂಗಳೂರು ಆಗುತ್ತಿತ್ತು. ದೆಹಲಿಯಲ್ಲಿ ಪೊಲೀಸರಿಗೆ ಬಂದೂಕು ತೋರಿಸುತ್ತಿದ್ದಾರೆ. ಅದನ್ನು ವಿರೋಧಿಸುವುದನ್ನು ಬಿಟ್ಟು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರೇನು ಪಾಕಿಸ್ತಾನಕ್ಕೆ ಜೈ ಅಂದಿದ್ದಾರಾ? ನಮ್ಮ ದೇಶದ ಒಂದು ಭಾಗಕ್ಕೆ ಜೈ ಎಂದಿದ್ದಾರೆ. ಅದರಲ್ಲಿ ತಪ್ಪೇನಿದೆ? ಹುಬ್ಬಳ್ಳಿ, ಬೆಂಗಳೂರಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕುವಾಗ ಕನ್ನಡಪರ ಹೋರಾಟಗಾರರು ಎಲ್ಲಿ ಹೋಗಿದ್ರಿ. ನಮ್ಮ ದೇಶದಲ್ಲಿರುವ ಒಂದು ಭಾಗಕ್ಕೆ ಜೈಕಾರ ಹಾಕುವುದರಲ್ಲಿ ತಪ್ಪೇನಿಲ್ಲ ಎಂದು ಸಚಿವರ ಪರ ಬ್ಯಾಟ್ ಬೀಸಿದರು.