ತುಮಕೂರು: ಬಿಜೆಪಿ ಶಾಸಕ ಬಿ.ಸುರೇಶ್ ಗೌಡ (B.Suresh Gowda) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಪರ ಬ್ಯಾಟ್ ಬೀಸಿದ್ದು, ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗುವ ಅರ್ಹತೆ ಇತ್ತು. ಆದರೆ ಸಮುದಾಯದ ಮುಖಂಡರ ನಿರ್ಲಕ್ಷ್ಯದಿಂದ ಸಿಎಂ ಸ್ಥಾನದಿಂದ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ (Tumakuru) ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ನೂರಕ್ಕೆ ನೂರು ನಾಯಕತ್ವ ಇದೆ. ಇವತ್ತು ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ಕಾರಣ ಡಿಕೆ ಶಿವಕುಮಾರ್ ಹಾಗೂ ಅವರ ಶಕ್ತಿ. ಆದರೆ ಸಮುದಾಯದ ಒಬ್ಬರೂ ಕಾಂಗ್ರೆಸ್‌ನವರು ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಲಿಲ್ಲ ಎಂದರು. ಇದನ್ನೂ ಓದಿ: ಯಾರೋ ಹುಡುಗರು ಮಾಡಿದ್ದಾರೆ, ಟ್ವೀಟ್ ವಿಥ್ ಡ್ರಾ ಮಾಡಿಸಿದ್ದೇನೆ: ಡಿಕೆ ಶಿವಕುಮಾರ್
Advertisement
Advertisement
ನಾನು ಇಲ್ಲಿ ಕುಳಿತಿರುವ ಸ್ವಾಮೀಜಿಯವರ ಬಳಿ ಹೇಳುತ್ತಿದ್ದೇನೆ. ನಮ್ಮ ಸಮಾಜದ ನಾಯಕತ್ವ ಬಂದಾಗ ನಮ್ಮ ಸಮಾಜ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಧ್ವನಿ ಎತ್ತಿ ಹೇಳಬೇಕಾಗುತ್ತದೆ. ಅವತ್ತು ನ್ಯಾಯ ಸಿಗುತ್ತದೆ. ಈ ಹಿಂದೆ ದೇವೇಗೌಡರು ಮುಖ್ಯಮಂತ್ರಿ ಆಗಬೇಕಾದರೆ ಹೋರಾಟ ಮಾಡಿ ಹಕ್ಕನ್ನು ನಾವು ಕಿತ್ತುಕೊಂಡಿರುವುದಕ್ಕೆ ದೇವೇಗೌಡರು ಮುಖ್ಯಮಂತ್ರಿ ಆದರು. ಇಲ್ಲ ಅಂದರೆ ಅವತ್ತು ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತದಲ್ಲಿ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ, ನಮ್ಮ ಮನದ ಮಾತನ್ನೂ ಕೇಳಿ – ಮೋದಿಗೆ ಮೌಲ್ವಿ ಮನವಿ
Advertisement
Web Stories