ಬೆಳಗಾವಿ: ಈ ವರ್ಷದ ರಣಭೀಕರ ಪ್ರಳಯದಲ್ಲಿ ಬೆಳಗಾವಿ ಜಿಲ್ಲೆ ಅತೀ ಹೆಚ್ಚು ಹಾನಿಗೆ ಒಳಗಾಗಿದೆ. ಆದರೆ ಆಡಳಿತ ನಡೆಸುತ್ತಿರುವ ಮಂದಿಗೆ ಸಂತಸ್ತರ ಗೋಳು ಕೇಳುವ ವ್ಯವಧಾನ ಇಲ್ಲದೇ ಹೋದರೂ ಸಂಭ್ರಮಾಚಾರಣೆಗೇನೂ ಕೊರತೆ ಇಲ್ಲ.
ಹೌದು. ಬೆಳಗಾವಿ ಜಿಲ್ಲೆಯ ಕಿತ್ತೂರು ಕೋಟೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಬುಧವಾರ ಚಾಲನೆ ಸಿಕ್ಕಿದೆ. ಪ್ರವಾಹ ಪೀಡಿತ ಊರುಗಳಿಗೆ ತಲೆಯೇ ಹಾಕದ ಸಚಿವರೆಲ್ಲ ನಿನ್ನೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
Advertisement
ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಪಾಟೀಲ್, ಸಚಿವ ಸಿ ಟಿ ರವಿ, ಸಚಿವೆ ಶಶಿಕಲಾ ಜೊಲ್ಲೆ, ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಸಂಸದ ಅನಂತ್‍ಕುಮಾರ್ ಹೆಗಡೆ ಹೀಗೆ ಎಲ್ಲರೂ ವೇದಿಕೆಯ ಮೇಲೆ ಕಾಣಿಸಿಕೊಂಡರು.
Advertisement
ಈ ವೇಳೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ವೀರ್ ಸಾವರ್ಕರ್ ಅವರು ಯಾವ ರೀತಿ ಹೋರಾಟ ಮಾಡಿದರು ಅನ್ನೋದು ಪುಸ್ತಕ ಓದಿದರೆ ಗೊತ್ತಾಗುತ್ತದೆ. ಕೆಲವರು ಕೀಳಾಗಿ ಮಾತನಾಡುತ್ತಿರುವುದು ಸರಿಯಲ್ಲ. ಕೆಲವೊಂದು ವಿಚಾರದಲ್ಲಿ ನಾವು ರಾಜಕೀಯವಾಗಿ ಯೋಚನೆ ಮಾಡಬೇಕಾಗುತ್ತದೆ. ಹಿಂದೆ ನಾನು ಕಿತ್ತೂರು ತಾಲೂಕು ಮಾಡಲು ಮುಂದಾದಾಗ ಅಧಿಕಾರಿಗಳು ಅಡ್ಡಗಾಲು ಹಾಕಿದರು. ನಾನು ಸಿಎಂ ಇದ್ದಾಗ 43 ತಾಲೂಕುಗಳನ್ನ ಘೋಷಣೆ ಮಾಡಿದ್ದೆ. ಆದರೆ ಹಿಂದಿನ ಸರ್ಕಾರಕ್ಕೆ ಅದನ್ನು ಅನುಷ್ಠಾನಕ್ಕೆ ತರಲು ಒತ್ತಾಯ ಮಾಡಬೇಕಾಯಿತು. ಈ ಭಾಗ ಕಿತ್ತೂರ ಕರ್ನಾಟಕ ಎಂದು ಕರೆಯುತ್ತಾ ಹೋಗಿ, ಆಗ ಇದು ಆಗೇ ಆಗುತ್ತದೆ. ಹೈದರಾಬಾದ್ ಕಾರ್ನಟಕ್ಕಕೆ ಹೋಗಿ ಕಲ್ಯಾಣ ಕರ್ನಾಟಕ ಆಗಿದೆ ಎಂದರು.
Advertisement
ಇದೇ ವೇಳೆ ಸಿ ಟಿ ರವಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಎಲ್ಲ ಜಾತಿಗೆ ಮೀರಿದವರು. ಅವರಿಗೆ ಒಂದು ಜಾತಿಗೆ ಸಿಮೀತ ಮಾಡುವುದು ಅವರ ಬದುಕಿನ ರೀತಿಗೆ ಮಾಡುವ ಅಪಮಾನ. ಹಿಂದೆ ನಮ್ಮನ್ನಾಳಿದವರು ಅವರ ಶೌರ್ಯದಿಂದ ಅಲ್ಲ. ನಮ್ಮ ಒಡಕಿನಿಂದ, ಅದರ ಲಾಭ ಅವರು ಪಡೆದಿದ್ದು, ಧರ್ಮ ಒಡೆದು ರಾಜಕೀಯ ಬೆಳೆ ಬೆಯಿಸಿಕೊಳ್ಳೊರು ಒಂದು ಕಡೆಯಾದ್ರೆ, ಇನ್ನೊಂದು ಕಡೆ ಭಾರತ ಮಾತಾಕಿ ಜೈ ಎನ್ನುವುದು ಅಪರಾಧ ಎಂದು ಬಿಂಬಿಸಲಾಗುತ್ತಿದೆ. ಇದು ಬದಲಾಗಬೇಕು ಎಂದರು.