ಚಿತ್ರದುರ್ಗ: ಬಿಜೆಪಿದ್ದು ಮಿಷನ್ ಸರ್ಕಾರ..ಕಾಂಗ್ರೆಸ್ಸಿನದ್ದು ಕಮೀಷನ್ ಸರ್ಕಾರ.. ನಮ್ಮದು ವಿಷನ್ ಸರ್ಕಾರ ಅಂತ ಮಾಜಿ ಸಿಎಂ, ಜಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚಿತ್ರದುರ್ಗದ ಹಿರಿಯೂರಿನಲ್ಲಿ ಮಾತನಾಡಿದ ಅವರು, ನಮ್ ಸರ್ಕಾರ ಬಂದ್ರೆ ರೈತರಿಗೆ ಷರತ್ತು ರಹಿತ ಸಾಲ ಮನ್ನಾಗೆ ಆದ್ಯತೆ ಕೊಡ್ತೇನೆ ಅಂದ್ರು. ರೈತರ ಸಾಲ ಮನ್ನಾ ಮಾಡದ ಬಿಎಸ್ ಯಡಿಯೂರಪ್ಪ ರೈತ ಬಂಧುನಾ ಎಂದು ವಾಗ್ದಾಳಿ ನಡೆಸಿದ್ರು.
ಹೆಸರಿಗೆ ಮಾತ್ರ ನಾನು ಸಿಎಂ ಆಗ್ತೇನೆ. ಅಧಿಕಾರ ನಿಮಗೆ ಕೊಡ್ತೇನೆ. ಕಾಂಗ್ರೆಸ್, ಬಿಜೆಪಿ ನಾಯಕರ ಮನೆ ಮುಂದೆ ನಿಲ್ಲುವಂತೆ ಮಾಡಬೇಡಿ. ಕಮೀಶನ್ ಸರ್ಕಾರಗಳು ನಿಮಗೆ ಬೇಕಾ? ಹೈಕಮಾಂಡ್‍ಗೆ ಕಪ್ಪ ಕಾಣಿಕೆ ಕೊಡುವ ಸರ್ಕಾರಗಳು ಬೇಕಾ ನಿರ್ಧರಿಸಿ ಎಂದು ಹೆಚ್‍ಡಿಕೆ ಜನತೆ ಮುಂದೆ ಆಯ್ಕೆಗಳನ್ನ ಇಟ್ಟರು.