ಬೆಂಗಳೂರು: ಕೋವಿಡ್ ಹೊಸ ಮಾರ್ಗಸೂಚಿ ಬಗ್ಗೆ ಸರ್ಕಾರದಲ್ಲಿ ಗೊಂದಲ ಎದ್ದುಕಾಣುತ್ತಿದೆ. ಬಿಜೆಪಿಯ ಹಲವು ಸಚಿವರು, ಶಾಸಕರ ಕ್ಷೇತ್ರಗಳಲ್ಲಿ ವ್ಯಾಪಾರಿ ವರ್ಗದವರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ವೀಕೆಂಡ್ ಕರ್ಫ್ಯೂ, 50% ರೂಲ್ಸ್ ಏಕಪಕ್ಷೀಯ ನಿರ್ಧಾರ ಎಂದು ಅಸಮಧಾನ ಕೇಳಿಬರುತ್ತಿದೆ.
Advertisement
ಬೆಂಗಳೂರಿನಲ್ಲಿ ಕೇಸ್ ಪ್ರಮಾಣ ಹೆಚ್ಚಾಗುತ್ತಿದೆ ನಿಜ. ಆದರೆ ಜಿಲ್ಲೆಗಳಲ್ಲಿ ಕೋವಿಡ್ ಕಮ್ಮಿ ಇದೆ. ಜಿಲ್ಲೆಗಳಲ್ಲಿ ಆತಂಕ, ಭಯದ ವಾತಾವರಣ ಇಲ್ಲ. ಕೋವಿಡ್ ಕಮ್ಮಿ ಇರುವ ಕಡೆಯೂ ವೀಕೆಂಡ್ ಕರ್ಫ್ಯೂ ಬೇಕಾಗಿರಲಿಲ್ಲ. ವೀಕೆಂಡ್ ಕರ್ಫ್ಯೂನಿಂದಾಗಿ ಜನಜೀವನ, ವ್ಯಾಪಾರ ವಹಿವಾಟಿಗೆ ತೊಡಕು ಉಂಟಾಗಿದೆ. ಮೊದಲೇ ಆರ್ಥಿಕ ಸಮಸ್ಯೆ, ಇಂತಹ ಸಂದರ್ಭದಲ್ಲಿ ಬರಸಿಡಿಲಿನಂತೆ ವೀಕೆಂಡ್ ಕರ್ಫ್ಯೂ ಮಾಡಿರುವ ಬಗ್ಗೆ ಜನಸಾಮಾನ್ಯರು, ವ್ಯಾಪಾರಿ ವರ್ಗದವರಿಂದ ತಮ್ಮ, ತಮ್ಮ ಕ್ಷೇತ್ರದ ಸಚಿವರು, ಶಾಸಕರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇತ್ತ ಸಚಿವ, ಶಾಸಕರಿಗೆ ಈ ಬಗ್ಗೆ ತಳಮಳ ಉಂಟಾಗಿದೆ. ಇದನ್ನೂ ಓದಿ: ರಾಜ್ಯದೆಲ್ಲೆಡೆ ವೀಕೆಂಡ್ ಕರ್ಫ್ಯೂ ಈಶ್ವರಪ್ಪ ಅಸಮಾಧಾನ
Advertisement
Advertisement
ಸಚಿವರು ಮತ್ತು ಶಾಸಕರು ಹೊಸ ಮಾರ್ಗಸೂಚಿಯಲ್ಲಿ ವಿನಾಯಿತಿ ಕೊಡಿ ಎಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತಿದ್ದು, ಸಚಿವರ ಜತೆ ಕ್ಯಾಬಿನೆಟ್‍ನಲ್ಲಿ ಚರ್ಚಿಸಿ ಟಫ್ ರೂಲ್ಸ್ ತರ್ತೀವಿ ಅಂದಿದ್ದ ಸಿಎಂ, ಕ್ಯಾಬಿನೆಟ್ ಸಭೆಗೂ ಮುನ್ನವೇ ಹೊಸ ಮಾರ್ಗಸೂಚಿ ಜಾರಿ ಮಾಡಿರುವುದರಿಂದ ಕೆಳ ಸಚಿವರು ಗರಂ ಆಗಿದ್ದಾರೆ. ಸಚಿವರ ಗಮನಕ್ಕೂ ತರದೇ ಹೊಸ ಮಾರ್ಗಸೂಚಿ ಜಾರಿ ಮಾಡಿರುವ ಬಗ್ಗೆ ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಹಲವು ಸಚಿವರು ಪ್ರಶ್ನೆ ಮಾಡುವ ಸಾಧ್ಯತೆ ಹೆಚ್ಚಿದೆ. ಇಂದು ನಡೆಯಲಿರುವ ಸಭೆಯಲ್ಲಿ ರೂಲ್ಸ್‌ಗಳಲ್ಲಿ ಸಚಿವರು ಕೇಳೋ ವಿನಾಯಿತಿಗೆ ಸಿಎಂ ಒಕೆ ಅಂತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ: ಸಿಎಂ ಮನವಿ
Advertisement
ಈ ನಡುವೆ ನಿನ್ನೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಇರೋದು ಹೌದು, ನಾನು ಇಲ್ಲ ಅಂತಾ ಹೇಳಿಲ್ಲ. ರಾಜ್ಯದ ಎಲ್ಲಾ ಕಡೆಯೂ ಇದು ಇಲ್ಲ. ಕೆಲವೆಡೆ 2-3-4-5 ಈ ರೀತಿ ಇದೆ. ಜಾಸ್ತಿ ಅಂದರೆ 10 ರವರೆಗೆ ಈ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಆದರೆ ರಾಜಧಾನಿಯಲ್ಲಿ ತುಂಬಾ ಜಾಸ್ತಿ ಇದೆ ಅಂದುಕೊಂಡು ಇಡೀ ರಾಜ್ಯಕ್ಕೆ ರೂಲ್ಸ್ ತರುವುದು ಸರಿನಾ ಅಂತಾ ಅನೇಕರು ನನಗೆ ಪ್ರಶ್ನೆ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಆಟೋ ರಿಕ್ಷಾ ಡ್ರೈವರ್, ಕೂಲಿ ಕಾರ್ಮಿಕರು, ಟೈಲರ್, ವ್ಯಾಪಿರಿಗಳು ಅವರ ಜೀವನಕ್ಕೆ ಎಲ್ಲಿ ಹೋಗಬೇಕು. ಎಲ್ಲರಿಗೂ ತೊಂದರೆ ಆಗುತ್ತದೆ. ಇಡೀ ರಾಜ್ಯದ ಜನರ ಅಭಿಪ್ರಾಯವನ್ನು ಸಚಿವ ಸಂಪುಟದ ಮುಂದೆ, ಮುಖ್ಯಮಂತ್ರಿ ಅವರ ಮುಂದೆ ಇಡುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನೂ ಓದಿ: ಕೋವ್ಯಾಕ್ಸಿನ್ ಲಸಿಕೆ ಪಡೆದ ಮಕ್ಕಳಿಗೆ ನೋವು ನಿವಾರಕ, ಪ್ಯಾರಸಿಟಮಲ್ ಮಾತ್ರೆ ನೀಡಲ್ಲ: ಭಾರತ್ ಬಯೋಟೆಕ್