ಬೆಂಗಳೂರು: ಊರಿಗೆಲ್ಲಾ ಬುದ್ಧಿ ಹೇಳುವ ಬಿಜೆಪಿ ಡಬಲ್ ಗೇಮ್ ತಂತ್ರವನ್ನು ಅನುಸರಿಸುತ್ತಿದೆ. ಮಾಜಿ ಸಿಎಂ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ತಮ್ಮ ಇಲಾಖೆಯ ಅಧಿಕಾರಿಗಳ ಜೊತೆಗೆ ಸರ್ಕಾರದ ಹಣದಲ್ಲಿ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸಕ್ಕೆ ಸಚಿವರು ಹಾಗೂ ಅಧಿಕಾರಿಗಳು ಪತ್ನಿ ಸಮೇತ ಹೋಗುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಉಂಟಾದ ನೆರೆಯಿಂದ ಜನರು ಸುಧಾರಿಸಿಕೊಂಡಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರು ಪ್ರವಾಹದ ಹಾನಿಯಿಂದ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅವರ ಪತ್ನಿ, ಅಧಿಕಾರಿಗಳು ಹಾಗೂ ಆಪ್ತರ ವಲಯದ ಜೊತೆಗೆ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
Advertisement
Advertisement
ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅವರ ಪತ್ನಿಯನ್ನು ಒಳಗೊಂಡಂತೆ ಒಟ್ಟು 9 ಜನರ ತಂಡಕ್ಕೆ ವಿದೇಶಿ ಪ್ರವಾಸದ ಪ್ಲ್ಯಾನ್ ಸಿದ್ಧವಾಗಿದೆ. ಒಟ್ಟು 10 ದಿನದ ಪ್ರವಾಸಕ್ಕೆ ಸರ್ಕಾರಿ ಹಣವನ್ನೆ ಬಳಸಿಕೊಳ್ಳಲಾಗುತ್ತಿದೆ. ನವೆಂಬರ್ 6ರಿಂದ 17ರ ವರೆಗೆ ಚೀನಾದಲ್ಲಿ 6 ದಿನ, 4 ದಿನ ಲಂಡನ್ ಸುತ್ತಾಡಲಿದ್ದಾರೆ. ಈಗಾಗಲೇ ಫ್ಲೈಟ್ ಬುಕ್ ಆಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
ಸೆಮಿನಾರ್ ನೆಪದಲ್ಲಿ ಎರಡು ದೇಶಗಳ ಪ್ರವಾಸಕ್ಕೆ ಸರ್ಕಾರದ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಸಚಿವರು, ಅಧಿಕಾರಿಗಳಿಗೆ ಸರ್ಕಾರಿ ಹಣವನ್ನು ಬಳಸಲಾಗುತ್ತಿದೆ. ಅವರೊಟ್ಟಿಗೆ ಬರುವ ಪತ್ನಿಯರಿಗೆ ವೈಯಕ್ತಿಯ ಹಣವನ್ನು ಭರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
Advertisement
ಯಾರೆಲ್ಲ ಹೋಗ್ತಾರೆ?
ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅವರ ಪತ್ನಿ ಶೀಲ್ಪಾ ಶೆಟ್ಟರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದಶಿ ಗೌರವ ಗುಪ್ತಾ, ಅವರ ಪತ್ನಿ ರೀನಾ ಗುಪ್ತಾ, ಜಗದೀಶ್ ಶೆಟ್ಟರ್ ಆಪ್ತ ಕಾರ್ಯದರ್ಶಿ ಧವಳೇಶ್ವರ್, ಎಂಎಸ್ಐಎಲ್ ಎಂಡಿ ಪ್ರಕಾಶ್, ಅವರ ಪತ್ನಿ, ಎಂಎಸ್ಐಎಲ್ ಅಧಿಕಾರಿ ಚಂದ್ರಪ್ಪ, ಹಾಗೂ ಪತ್ನಿ ವಿದೇಶ ಪ್ರವಾಸದ ಲಿಸ್ಟ್ ನಲ್ಲಿ ಇದ್ದಾರೆ.
ಶೆಟ್ಟರ್ಗೆ ‘ಪಬ್ಲಿಕ್’ ಪ್ರಶ್ನೆ:
*ಪ್ರಶ್ನೆ 1- ನೆರೆಯಿಂದ ಬೆಳಗಾವಿ ತತ್ತರಿಸಿ ಹೋಗಿದೆ. ಉಸ್ತುವಾರಿ ಸಚಿವರು ಹೇಗೆ ಹೋಗ್ತೀರಾ..?
*ಪ್ರಶ್ನೆ 2 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಪತ್ನಿಯನ್ನು ಏಕೆ ಕರೆದುಕೊಂಡು ಹೋಗ್ತೀರಾ..?
*ಪ್ರಶ್ನೆ 3 – ಪತ್ನಿಯ ಪ್ರವಾಸ ವೆಚ್ಚ ಸರ್ಕಾರ ಭರಿಸದಿದ್ದರೂ ಪತ್ನಿ ಜೊತೆಗೆ ಹೋಗುವುದು ಏಕೆ..?
*ಪ್ರಶ್ನೆ 4 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಅಧಿಕಾರಿಗಳ ಪತ್ನಿಯರಿಗೆ ಏನು ಕೆಲಸ..?
*ಪ್ರಶ್ನೆ 5 – ರಾಹುಲ್ ಗಾಂಧಿ ಇಂಡೋನೇಷ್ಯಾ ಖಾಸಗಿ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ..?
*ಪ್ರಶ್ನೆ 6 – ಜೆಡಿಎಸ್ ಶಾಸಕರ ಮಲೇಷ್ಯಾ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ…?