ಮುಂಬೈ: ಚಾರ್ಟೆಡ್ ವಿಮಾನ ದುರಂತದಿಂದ ಅಕಾಲಿಕ ನಿಧನಕ್ಕೀಡಾದ ಮಹಾರಾಷ್ಟ್ರ ಡಿಸಿಎಂ, ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಸಾವಿನ ವಿಚಾರದಲ್ಲೂ ರಾಜಕೀಯವಾಗಿತ್ತು. ಇದೀಗ ಪತ್ನಿ ಸುನೇತ್ರಾ ಪವಾರ್‌ಗೆ (Sunetra Pawar) ತರಾತುರಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿರೋದು ವ್ಯಾಪಕ ಚರ್ಚೆಗೀಡಾಗಿದೆ.
ಪತಿಯ ಅಂತ್ಯಕ್ರಿಯೆ ಪೂರ್ಣಗೊಳ್ಳುವ ಮೊದಲೇ ಸುನೇತ್ರಾ ಪವಾರ್ ಡಿಸಿಎಂ ಆಗಿ ನೇಮಕಗೊಂಡಿರುವುದರ ಹಿಂದೆ ಬಿಜೆಪಿ ‘ಮಾಸ್ಟರ್ ಮೈಂಡ್’ ಕೈವಾಡ ಇದೆ ಅಂತ ಉದ್ಧವ್ ಶಿವಸೇನೆಯ ಮುಖವಾಣಿಯಾದ ʻಸಾಮ್ನಾʼದ ಸಂಪಾದಕೀಯದಲ್ಲಿ (Saamana Editorial) ಬರೆದುಕೊಂಡಿದೆ. ಇದನ್ನೂ ಓದಿ: ಲಡಾಖ್ ಗಡಿ ಸಂಘರ್ಷ; ನರವಾಣೆ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಗಾ – ಲೋಕಸಭೆಯಲ್ಲಿ ಗದ್ದಲ
ಎನ್‌ಸಿಪಿ ನಾಯಕರಾದ (NCP Leader) ಸುನಿಲ್ ತತ್ಕರೆ ಮತ್ತು ಪ್ರಫುಲ್ ಪಟೇಲ್ ಹಾಗೂ ಬಿಜೆಪಿ ನಾಯಕರಿಗೆ ಎನ್‌ಸಿಪಿಯ 2 ಬಣಗಳು ಒಗ್ಗೂಡುವುದನ್ನು ಬಯಸುವುದಿಲ್ಲ ಎಂದು ಆರೋಪಿಸಿದೆ. ಸುನೇತ್ರಾ ಪ್ರಮಾಣವಚನ ನನಗೆ ತಿಳಿದಿಲ್ಲ ಅಂತ ಅಜಿತ್ ಪವಾರ್ ಚಿಕ್ಕಪ್ಪ ಶರದ್ ಪವಾರ್ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಪಂದ್ಯವಾಡದೇ ಇದ್ದರೆ ಪಾಕಿಗೆ 200 ಕೋಟಿ ನಷ್ಟ
ಶರದ್‌ಪವಾರ್, ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅಥವಾ ಪವಾರ್ ಕುಟುಂಬದ ಇತರ ಸದಸ್ಯರಿಗೆ ಈ ನಡೆಯ ಬಗ್ಗೆ ತಿಳಿದಿರಲಿಲ್ಲ. ಸುನೇತ್ರಾ ಪವಾರ್ ಬಾರಾಮತಿಯಿಂದ ಮುಂಬೈಗೆ ಪ್ರಯಾಣಿಸುತ್ತಿರುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಹಾಗಾದರೆ, ಸುನೇತ್ರಾ ಪ್ರಮಾಣ ವಚನ ಸ್ವೀಕರಿಸುವ ನಿರ್ಧಾರ ಯಾರದ್ದು..? ಎಂದು ಸಾಮ್ನಾದಲ್ಲಿ ಪ್ರಶ್ನಿಸಲಾಗಿದೆ. ಇದನ್ನೂ ಓದಿ: ಪುಣೆ ಪೋರ್ಷೆ ಅಪಘಾತ ಪ್ರಕರಣ – ರಕ್ತದ ಮಾದರಿ ಬದಲಿಸಿದ್ದ ಆರೋಪಿಗಳಿಗೆ ಜಾಮೀನು
ಈ ರಾಜಕೀಯದ ಹಿಂದಿನ ಸೂತ್ರಧಾರಿ ಬಿಜೆಪಿ ನಾಯಕರು ಅಂತ ಕಿಡಿಕಾರಿದೆ. ಪತಿಯ ಅಂತ್ಯಕ್ರಿಯೆಗಳು ಪೂರ್ಣಗೊಳ್ಳುವ ಮೊದಲೇ ಪ್ರಮಾಣವಚನ ಸ್ವೀಕರಿಸುವುದು ಹಿಂದುತ್ವ ನಂಬಿಕೆಗಳಿಗೆ ಹೊಂದಿಕೆಯಾಗುವುದಿಲ್ಲ. ಪಕ್ಷದ ನಿಯಂತ್ರಣ ಪ್ರಫುಲ್ ಪಟೇಲ್‌ಗೆ ಹೋಗೋದನ್ನ ತಡೆಯಲು ಸುನೇತ್ರಾಗೆ ತರಾತುರಿಯಲ್ಲಿ ಡಿಸಿಎಂ ಪಟ್ಟ ಕಟ್ಟಲಾಗಿದೆ. ಸುನೇತ್ರಾ ಮೂಕಗೊಂಬೆಯಾಗಿರದೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು ಅಂತಲೂ ಸಾಮ್ನಾದಲ್ಲಿ ಆಗ್ರಹಿಸಲಾಗಿದೆ.



