ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಆರ್‍ಎಸ್‍ಎಸ್ ಮುಖಂಡರು ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಸಿದ್ಧರಾಗುತ್ತಿದ್ದಾರೆ. ಒಂದು ವೇಳೆ ಬ್ರಹ್ಮಾಸ್ತ್ರ ಪ್ರಯೋಗ ಆದರೆ ಬಿಜೆಪಿ ನಾಯಕರಿಗೆ ಶಾಕ್ ಆಗೋದು ಗ್ಯಾರಂಟಿಯಾಗಿದೆ.
ಆರ್ ಎಸ್‍ಎಸ್ ಅವರು 7 ಬಿಜೆಪಿ ನಾಯಕರನ್ನೇ ಟಾರ್ಗೆಟ್ ಮಾಡಿದ್ದು, ಲೋಕಸಭಾ ಚುನಾವಣೆಗೆ 7 ಮಂದಿಗೆ ಟಿಕೆಟ್ ಕೊಡಬೇಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಹೇಳಿದ್ದಾರೆ. ಹಾಲಿ 7 ಮಂದಿ ಸಂಸದರಿಗೆ ಟಿಕೆಟ್ ಕೊಡಬೇಡಿ. ಅವರಿಗೆ ಟಿಕೆಟ್ ಕೊಟ್ಟರೆ ಕಷ್ಟ ಆಗುತ್ತದೆ. ಮೈತ್ರಿ ಅಸ್ತ್ರಕ್ಕೆ ತಿರುಗೇಟು ನೀಡಬೇಕು ಅಂದರೆ ಹೊಸ ಮುಖ ನೋಡಿ. ಈಗಾಗಲೇ 7 ಮಂದಿ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದೆ. ಹಾಗಾಗಿ ಅವರಿಗೆ ಟಿಕೆಟ್ ನೀಡಿದರೆ ಇರುವ ಸ್ಥಾನಗಳು ಕೈತಪ್ಪಿ ಹೋಗಲಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮುಂದೆ ಆರ್ ಎಸ್‍ಎಸ್ ಮುಖಂಡರು ಪ್ರಸ್ತಾಪ ಮಾಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇತ್ತ ಆರ್ ಎಸ್‍ಎಸ್ ಮುಖಂಡರ ಪ್ರಸ್ತಾಪಕ್ಕೂ ಮೊದಲೇ ಅಮಿತ್ ಷಾ ಕೈಗೆ ಗುಪ್ತವರದಿ ಸೇರಿದ್ದು, 7 ಅಲ್ಲ 9 ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂದು ಅಮಿತ್ ಷಾ ಹೇಳಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಆರ್‍ಎಸ್‍ಎಸ್ ಬ್ರಹ್ಮಾಸ್ತ್ರವನ್ನು ಬಿಜೆಪಿ ಹೈಕಮಾಂಡ್ ಪ್ರಯೋಗ ಮಾಡುತ್ತಾ ಎಂಬ ಪ್ರಶ್ನೆ ಮೂಡಿದೆ.
ಏಳು ಕ್ಷೇತ್ರಗಳ ಟಾರ್ಗೆಟ್ ಲಿಸ್ಟ್ ನಲ್ಲಿ ಸೀನಿಯರ್ ಸಂಸದರು ಕೂಡ ಇದ್ದಾರೆ. 3 ಬಾರಿ ಹಾಗೂ 2 ಬಾರಿ ಗೆದ್ದ ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಯಡಿಯೂರಪ್ಪ ಅಭಿಪ್ರಾಯದ ಮೇಲೆ ಬದಲಾವಣೆಯ ಪರ್ವ ನಿಂತಿದ್ದು, ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ಯಡಿಯೂರಪ್ಪ ಒಪ್ಪಿ ಬಿಡುತ್ತಾರಾ ಎಂದು ನಾಯಕರಲ್ಲಿ ಗೊಂದಲ ಮೂಡಿದೆ.
ಸದ್ಯಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರು ಆರ್ ಎಸ್‍ಎಸ್ ಮುಖಂಡರ ಮಾತುಗಳನ್ನು ತೆಗೆದು ಹಾಕುವುದಿಲ್ಲ ಎಂದು ಹೇಳಲಾಗುತ್ತಿದೆ. ಯಾಕೆಂದ್ರೆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಆರ್ ಎಸ್‍ಎಸ್ ಸಲಹೆಯನ್ನು ಪಡೆಯಬೇಕು ಎಂದು ಚಿಂತನೆಯನ್ನು ಮಾಡಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews