ಮುಂಬೈ: ಮಹಾರಾಷ್ಟ್ರ ಬಿಜೆಪಿ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿಯನ್ನು “ಮರಾಠಿ ರಾಬ್ರಿ ದೇವಿ” ಎಂದು ಕರೆಯುವ ಮೂಲಕ ಟ್ವೀಟ್ ಮಾಡಿದ್ದು, ಈ ಪೋಸ್ಟ್ ಇದೀಗ ಭಾರೀ ವಿವಾದ ಸೃಷ್ಟಿಸಿದೆ.
Advertisement
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರಿಗೆ ರಶ್ಮಿ ಠಾಕ್ರೆ ಅವರನ್ನು ಹೋಲಿಸಿದ ಆರೋಪದಡಿ ಮುಂಬೈ ಪೊಲೀಸರು ಗುರುವಾರ ಬಿಜೆಪಿ ಕಾರ್ಯಕರ್ತ ಜಿತೇನ್ ಗಜಾರಿಯಾ ಅವರಿಗೆ ಸಮನ್ಸ್ ನೀಡಿದ್ದಾರೆ. ಬಿಜೆಪಿ ಸೋಶಿಯಲ್ ಮೀಡಿಯಾ ವಿಭಾಗದ ಜಿತೇನ್ ಗಜಾರಿಯಾ ಆಕ್ಷೇಪಾರ್ಹ ಟ್ವೀಟ್ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಯಿತು. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ
Advertisement
Advertisement
ರಶ್ಮಿ ಠಾಕ್ರೆ ಅವರ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ರಾಬ್ರಿ ದೇವಿ ಎಂದು ಜಿತೇನ್ ಗಜಾರಿಯಾ ಟ್ವೀಟ್ ಮಾಡಿದ್ದರು. ಈ ಹೇಳಿಕೆ ಕುರಿತಂತೆ ಗಜಾರಿಯಾ ಅವರನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ಗೆ ವಿಚಾರಣೆಗೆ ಪೊಲೀಸರು ಕರೆಸಿರುವುದಾಗಿ ಮುಂಬೈ ವಕ್ತಾರ ವಿವೇಕಾನಂದ ಗುಪ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ
Advertisement
Marathi Rabri Devi pic.twitter.com/P1rnO0SC9o
— Jiten Gajaria (@jitengajaria) January 4, 2022
ಮತ್ತೊಂದೆಡೆ ಬೆನ್ನು ಮೂಳೆಯ ಸಮಸ್ಯೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ಉದ್ಧವ್ ಠಾಕ್ರೆ ಅವರು ಅಸ್ವಸ್ಥರಾಗಿರುವ ಕಾರಣ ಮಹಾರಾಷ್ಟ್ರದ ಹಲವು ಬಿಜೆಪಿ ನಾಯಕರು, ಠಾಕ್ರೆ ಅವರಿಗೆ ತಮ್ಮ ಶಿವಸೇನೆ ಸಹೋದ್ಯೋಗಿಗಳು, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕರಲ್ಲಿ ನಂಬಿಕೆ ಇಲ್ಲದಿದ್ದರೆ, ಅವರ ಪತ್ನಿ ಅಥವಾ ಪುತ್ರ ಆದಿತ್ಯ ಠಾಕ್ರೆ ಅವರನ್ನು ಮಹಾರಾಷ್ಟ್ರದ ಸಿಎಂ ಆಗಿ ನೇಮಿಸಬೇಕು ಎಂದು ಪತ್ತಾಯಿಸುತ್ತಿದ್ದಾರೆ.