ವಿಜಯಪುರ: ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಬಿಜೆಪಿ ಮಹಾನಾಯಕನ ಬೆಂಬಲವಿದೆ, ನಮ್ಮವರೇ ವಸೂಲಿ ಮಾಡುತ್ತಿದ್ದಾರೆ. ಅಡ್ಜಸ್ಟ್‌ಮೆಂಟ್ ಇರೋದ್ರಿಂದಾನೇ ಇದೆಲ್ಲ ಆಗುತ್ತಿದೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿ ಕಾರಿದರು.
ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಶಾಸಕ ಜಮೀರ್ ಅಹ್ಮದ್‌ಖಾನ್ ಕಡೆಯಿಂದ ಆಹಾರದ ಕಿಟ್ ವಿತರಣೆಯಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಮೀರ್ ಅವರು ಹಿಂದೂ ವಿರೋಧಿ ಕೆಲಸಗಳನ್ನೇ ಮಾಡುತ್ತಿದ್ದಾರೆ. ಈಗ ಕಲ್ಲು ಹೊಡೆದವರಿಗೆ ಸಹಾಯ ಮಾಡುತ್ತಿದ್ದಾರೆ. ಇದರಲ್ಲಿ ನಮ್ಮವರ ವಸೂಲಿಯೂ ಇದೆ. ಬಿಜೆಪಿ ಮಹಾನಾಯಕನ ಬೆಂಬಲವಿದೆ. ಈ ಅಡ್ಜಸ್ಟ್‌ಮೆಂಟ್ ಇರೋದ್ರಿಂದಾನೇ ಇದೆಲ್ಲ ನಡೆಯುತ್ತಿದೆ ಎಂದು ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವವರನ್ನೆಲ್ಲ ಬಂಧಿಸುತ್ತಿರುವಾಗ, ಇವರನ್ನೇಕೆ ಬಿಟ್ಟಿದ್ದಾರೆ? ಗೃಹ ಸಚಿವರು ಶಾಸಕ ಜಮೀರ್‌ನನ್ನು ಈ ಕೂಡಲೆ ಒದ್ದು ಒಳಗೆ ಹಾಕಿಸಬೇಕು. ಸಿದ್ದರಾಮ್ಯಯ ಅವರೇ ಜಮೀರ್‌ನನ್ನು ಪಕ್ಷದಿಂದ ಕಿತ್ತು ಒಗೆದಿದ್ದಾರೆ. ಈ ಬಗ್ಗೆಯೂ ಜಮೀರ್ ಪ್ರತಿಕ್ರಿಯೆ ಕೊಟ್ಟಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಯತ್ನಾಳ್ ಆಗ್ರಹಿಸಿದರು. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು