ಬೆಂಗಳೂರು: ವಾಟ್ಸಾಪ್‌ನಲ್ಲಿ ಬಂದ ಸುಳ್ಳು ಸುದ್ದಿಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಬಳಿಕ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
Advertisement
ಯಾವ್ಯಾವ ಸಮುದಾಯದವರನ್ನು ಬಿಜೆಪಿ ರಾಷ್ಟ್ರಪತಿ ಮಾಡಿದೆ ಎಂಬ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್ ಮಾಡಿದ್ದಾರೆ. ಮೊದಲ ಮುಸ್ಲಿಂ ರಾಷ್ಟ್ರಪತಿಯನ್ನು ಮಾಡಿದ್ದು ನಾವೇ.. ಮೊದಲ ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ.. ಮೊದಲ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ.. ನಾವು ಜಾತಿವಾದಿಗಳಲ್ಲ.. ರಾಷ್ಟ್ರವಾದಿಗಳು.. ವಾಟ್ಸಾಪ್‌ನಲ್ಲಿ ಬಂದ ಸಂದೇಶ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಆಕ್ಷೇಪ, ಟೀಕೆಗಳು ವ್ಯಕ್ತವಾಗಿವೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ
Advertisement
Advertisement
ಇದಕ್ಕೆ ವಾಟ್ಸಾಪ್ ವಿಶ್ವವಿದ್ಯಾನಿಲಯದವರ ಜ್ಞಾನದ ಮಟ್ಟ ಇದು ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಕೋಟಾ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದುಕೊಂಡು ವಾಟ್ಸಾಪ್‌ನಲ್ಲಿ ಬಂದಿದ್ದನ್ನು ಯಥಾವತ್ತಾಗಿ ಪೋಸ್ಟ್ ಮಾಡುತ್ತಾರೆ ಎಂದರೆ ಅವರ ಬುದ್ದಿಗೆ ಎಷ್ಟು ಮಂಕು ಕವಿದಿರಬಹುದು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು; ಡೀಸೆಲ್‌ಗಾಗಿ ಬಂಕ್‌ನಲ್ಲಿ 5 ದಿನ ಕ್ಯೂನಲ್ಲಿ ನಿಂತಿದ್ದ ಟ್ರಕ್ ಡ್ರೈವರ್ ಸಾವು
Advertisement
ಪೂಜಾರಿಯವರೇ ವಾಟ್ಸ್ಅಪ್‌ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ. ಮೊದಲ ಮುಸ್ಲಿಂ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ, ಮೊದಲ ಸಿಖ್ಖ್ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ, ಮೊದಲ ದಲಿತ ರಾಷ್ಟ್ರಪತಿಯೂ ಕಾಂಗ್ರೆಸ್‌ನ ಕೊಡುಗೆ, ಅಷ್ಟೆ ಏಕೆ? ಮೊದಲ ಮಹಿಳಾ ರಾಷ್ಟ್ರಪತಿಯ ಕೊಡುಗೆಯೂ ಕಾಂಗ್ರೆಸ್‌ನದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ನೀವು ರಾಷ್ಟ್ರವ್ಯಾದಿಗಳು: ಕಾಂಗ್ರೆಸ್ ಯಾವತ್ತೂ ರಾಷ್ಟ್ರಪತಿ ಮಾಡಿದ್ದನ್ನು ಪ್ರಚಾರಕ್ಕೆ ಬಳಸಲಿಲ್ಲ. ಇದೇ ಕಾಂಗ್ರೆಸ್‌ಗೂ ಬಿಜೆಪಿಗೂ ಇರುವ ವ್ಯತ್ಯಾಸ. ನೀವು ರಾಷ್ಟ್ರವಾದಿಗಳಲ್ಲ. ರಾಷ್ಟ್ರವ್ಯಾದಿಗಳು ಎಂದು ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.