ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ನಿರೀಕ್ಷೆಯಂತೆ 80 ಕ್ಷೇತ್ರಗಳ ಬಲಾಬಲ ಹೊಂದಿರುವ ಉತ್ತರ ಪ್ರದೇಶದ 51 ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಆದ್ರೆ ಪ್ರತಿಷ್ಟೆಯ ಕಣವಾಗಿರುವ ಕರ್ನಾಟಕಕ್ಕೆ ಭಾರೀ ನಿರಾಸೆಯಾಗಿದೆ. ಇದನ್ನೂ ಓದಿ: BJP First list: 3ನೇ ಬಾರಿಗೆ ವಾರಣಾಸಿಯಿಂದ ಮೋದಿ ಕಣಕ್ಕೆ
Advertisement
ಯಾವ ರಾಜ್ಯಗಳಿಗೆ ಎಷ್ಟು ಸೀಟು?
* ಉತ್ತರ ಪ್ರದೇಶದಿಂದ – 51 (ಒಟ್ಟು ಕ್ಷೇತ್ರಗಳು – 80)
* ಪಶ್ಚಿಮ ಬಂಗಾಳದಿಂದ – 20 (ಒಟ್ಟು ಕ್ಷೇತ್ರ – 42)
* ಮಧ್ಯಪ್ರದೇಶದಿಂದ – 24 (ಒಟ್ಟು ಕ್ಷೇತ್ರ – 29)
* ಗುಜರಾತ್ – 15 (ಒಟ್ಟು ಕ್ಷೇತ್ರ – 26)
* ರಾಜಸ್ಥಾನ – 15 (ಒಟ್ಟು ಕ್ಷೇತ್ರ – 25)
* ಕೇರಳ – 12 (ಒಟ್ಟು ಕ್ಷೇತ್ರ – 20)
* ತೆಲಂಗಾಣ – 9 (ಒಟ್ಟು ಕ್ಷೇತ್ರ – 17)
* ಅಸ್ಸಾಂ – 11 (ಒಟ್ಟು ಕ್ಷೇತ್ರ – 14)
* ಜಾರ್ಖಂಡ್ – 11 (ಒಟ್ಟು ಕ್ಷೇತ್ರ – 14)
* ಛತ್ತೀಸ್‌ಗಢದಿಂದ – 11 (ಒಟ್ಟು ಕ್ಷೇತ್ರ – 11)
* ದೆಹಲಿಯಿಂದ – 5 (ಒಟ್ಟು ಕ್ಷೇತ್ರ – 07)
* ಜಮ್ಮು ಮತ್ತು ಕಾಶ್ಮೀರ – 2 (ಒಟ್ಟು ಕ್ಷೇತ್ರ – 5)
* ಉತ್ತರಾಖಂಡ – 3 (ಒಟ್ಟು ಕ್ಷೇತ್ರ – 05)
* ಅರುಣಾಚಲ ಪ್ರದೇಶ – 2 (ಒಟ್ಟು ಕ್ಷೇತ್ರ – 02)
* ಗೋವಾ – 1 (ಒಟ್ಟು ಕ್ಷೇತ್ರ – 02)
* ತ್ರಿಪುರಾ – 1 (ಒಟ್ಟು ಕ್ಷೇತ್ರ – 02)
* ಅಂಡಮಾನ್ ಮತ್ತು ನಿಕೋಬಾರ್ – 1 (ಒಟ್ಟು ಕ್ಷೇತ್ರ – 01)
* ದಮನ್ ಮತ್ತು ದಿಯು – 1 (ಒಟ್ಟು ಕ್ಷೇತ್ರ – 02)
Advertisement
Advertisement
ಈ ಬಾರಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ 34 ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, 28 ಮಹಿಳೆಯರು, 47 ಹೊಸ ನಾಯಕರು, ಒಬಿಸಿ ಸಮುದಾಯದ 57 ಸದಸ್ಯರು ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: Lok Sabha: ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್‌ಗೆ ಬಿಜೆಪಿ ಟಿಕೆಟ್
Advertisement
ಪ್ರಮುಖ ಅಭ್ಯರ್ಥಿಗಳು
ವಾರಣಾಸಿ – ನರೇಂದ್ರ ಮೋದಿ
ಅಮೇಥಿ – ಸ್ಮೃತಿ ಇರಾನಿ
ಮಥುರಾ – ಹೇಮಮಾಲಿನಿ
ಗಾಂಧಿನಗರ – ಅಮಿತ್ ಶಾ