ನವದೆಹಲಿ: ಬಿಜೆಪಿ (BJP) ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ವಿರುದ್ಧ ಸಮರ ಸಾರಿರುವ ಬಂಡಾಯ ನಾಯಕರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಫೆ.10 ರಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಲಿಂಗಾಯತ ನಾಯಕರ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೋಳಿ, ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್, ಕುಮಾರ ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಕರ್ನಾಟಕ ಭವನದಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಜೊತೆಗೆ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಭಾರತೀಯರು ವಾಪಸ್
- Advertisement3
ಸಭೆಯಲ್ಲಿ ಹಂತ ಹಂತವಾಗಿ ಸಮುದಾಯವಾರು ಹೈಕಮಾಂಡ್ ಮೇಲೆ ಒತ್ತಡ ಹೇರುವ ನಿರ್ಧಾರಕ್ಕೆ ಬಂದಿದೆ. ಓಬಿಸಿ ಹಾಗೂ ದಲಿತ ನಾಯಕರು ಈಗಾಗಲೇ ವರಿಷ್ಠರನ್ನು ಭೇಟಿ ಮಾಡಿದ್ದು, ಈಗ ಲಿಂಗಾಯತ ಸಮುದಾಯ ಪ್ರತಿನಿಧಿಸುವ ನಾಯಕರಿಂದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಕೇಸ್ – ನಲಪಾಡ್ ಎಸ್‌ಐಟಿ ನೋಟಿಸ್
- Advertisement
ಫೆ.10ರಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಸರ್ಕಾರಿ ನಿವಾಸದಲ್ಲಿ ಗೃಹ ಪ್ರವೇಶ ಪೂಜೆ ನಡೆಯಲಿದ್ದು, ಈ ಸಭೆಗೆ ಎಲ್ಲಾ ರೆಬೆಲ್ ಲಿಂಗಾಯತ ನಾಯಕರನ್ನು ಆಹ್ವಾನಿಸುವ ನಿರ್ಧಾರಕ್ಕೆ ಬರಲಾಗಿದೆ. ಅಂದು ಪೂಜೆಯ ನೆಪದಲ್ಲಿ ಎಲ್ಲ ನಾಯಕರು ಜೊತೆಯಾಗಿ ಸಭೆ ನಡೆಸಿ ಬಿ.ವೈ ವಿಜಯೇಂದ್ರ ಅವರನ್ನು ಪದಚ್ಯುತಿಗೊಳಿಸಲು ಹೈಕಮಾಂಡ್ ಮೇಲೆ ಒತ್ತಡ ಹೇರುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯದ ಮೊದಲ ಕ್ಯಾನ್ಸರ್ ಡೇ ಕೇರ್ ಕೀಮೋಥೇರಪಿ ಸೆಂಟರ್ ರಾಯಚೂರಿನಲ್ಲಿ ಆರಂಭ
ಸಭೆ ಬಳಿಕ ಮಾತನಾಡಿದ ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್, ಫೆ.10ರ ನಂತರ ಶುಭ ಸುದ್ದಿ ಸಿಗಲಿದೆ. ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಭೆಯ ಬಗ್ಗೆ ಪರೋಕ್ಷವಾಗಿ ಮಾಹಿತಿ ಹಂಚಿಕೊಂಡರು. ಫೆ.10ರ ಬಳಿಕ ಶುಭ ಸುದ್ದಿ ಎಂದು ರಮೇಶ್ ಜಾರಕಿಹೊಳಿ ಕೂಡ ಧ್ವನಿಗೂಡಿಸಿದರು. ಇದನ್ನೂ ಓದಿ: ವಿಜಯೇಂದ್ರರನ್ನ ಕೆಳಗಿಳಿಸಿದರೆ ಬಿಜೆಪಿಗೆ 10 ಸೀಟೂ ಬರಲ್ಲ: ರೇಣುಕಾಚಾರ್ಯ