ಬೆಂಗಳೂರು: ಇದೇ ಗುರುವಾರ (ಜು.18ರಂದು) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು, ಗುರುವಾರ ಸದನದ ಒಳಗೆ ಮತ್ತು ಹೊರಗೆ ತೀವ್ರ ಹೋರಾಟ ನಡೆಸುವುದು, SCSP-TSP ಹಣ ದುರ್ಬಳಕೆ ಹಾಗೂ ಮುಡಾ ಪ್ರಕರಣದಲ್ಲಿ ಹೋರಾಟ ತೀವ್ರಗೊಳಿಸುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಯಿತು. 1 ಲಕ್ಷದಷ್ಟು ಜನರನ್ನು ಸೇರಿಸಿ ಪ್ರತಿಭಟನೆ ನಡೆಸುವ ಮೂಲಕ ವಿಧಾನಸೌಧ ಮುತ್ತಿಗೆಗೆ ತೀರ್ಮಾನಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಅರವಿಂದ ಬೆಲ್ಲದ್, ಸಿ.ಸಿ ಪಾಟೀಲ್, ಭೈರತಿ ಬಸವರಾಜ್, ಅಶ್ವಥ್ ನಾರಾಯಣ್, ಆರಗ ಜ್ಞಾನೇಂದ್ರ, ಅಶ್ವಥ್ ನಾರಾಯಣ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು.
Advertisement
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ವಿಚಾರ ಪ್ರಸ್ತಾಪಿಸಲಾಯಿತು. SCSP-TSP ಹಣ ದುರ್ಬಳಕೆ ಹಾಗೂ ಮುಡಾ ಪ್ರಕರಣದಲ್ಲಿ ಹೋರಾಟ ತೀವ್ರಗೊಳಿಸುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
Advertisement
Advertisement
ಸಭೆಯ ನಿರ್ಣಯಗಳೇನು?
* SCSP-TSP ಹಣ ದುರ್ಬಳಕೆ ಹಾಗೂ ಮುಡಾ ಪ್ರಕರಣದಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧಾರ
* ಈ ವಾರ ವಾಲ್ಮೀಕಿ ನಿಗಮದ ಅಕ್ರಮ ಹಾಗೂ SCSP-TSP ಹಣ ದುರ್ಬಳಕೆ ಪ್ರಕರಣಗಳಲ್ಲಿ ಚರ್ಚೆಗೆ ನಿರ್ಣಯ
* ಸದನ ಬಹಿಷ್ಕಾರ, ಬಾವಿಗಿಳಿದು ಹೋರಾಟ ಬದಲು ಪರಿಣಾಮಕಾರಿ ಚರ್ಚೆಗೆ ಆದ್ಯತೆ ಕೊಡಲು ನಿರ್ಣಯ
* ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆ ಹಾಗೂ ಪ್ರಕರಣ ಸಿಬಿಐಗೆ ಕೊಡುವಂತೆ ತೀವ್ರ ಒತ್ತಾಯ ಹಾಕಲು ನಿರ್ಧಾರ
* ಗುರುವಾರ (ಜು.18) ಬೃಹತ್ ಪ್ರತಿಭಟನೆ, ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ
* ಜು.18ರಂದು ಸದನದ ಒಳಗೆ ಮತ್ತು ಹೊರಗೆ ಹೋರಾಟಕ್ಕೆ ನಿರ್ಧಾರ
* ದೊಡ್ಡ ಸಂಖ್ಯೆಯ ಕಾರ್ಯಕರ್ತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನ