– ಮೂರು ಚೀಲದಷ್ಟು ಟೈಲ್ಸ್ ಪೀಸ್ ತುಂಬಿಟ್ಟಿದ್ದೇನೆ ಎಂದು ಅಳಲು ತೋಡಿಕೊಂಡ ಮಹಿಳೆ
ಶಿವಮೊಗ್ಗ: ಟೈಲ್ಸ್ ಪೀಸ್‌ಗಳನ್ನು ಮೂರು ಚೀಲದಷ್ಟು ತುಂಬಿದ್ದೇವೆ ಸರ್ ಎಂದು ಮಹಿಳೆಯೊಬ್ಬರು ಬಿಜೆಪಿ (BJP) ಸತ್ಯಶೋಧನಾ ಸಮಿತಿ ನಾಯಕರ ಮುಂದೆ ಅಳಲು ತೋಡಿಕೊಂಡರು.
ಶಿವಮೊಗ್ಗದಲ್ಲಿ (Shivamogga) ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ತೊಂದರೆ ಅನುಭವಿಸಿದ ರಾಗಿಗುಡ್ಡದ ಸಂತ್ರಸ್ತರ ಮನೆಗಳಿಗೆ ಗುರುವಾರ ಬಿಜೆಪಿ ಸತ್ಯಶೋಧನಾ ಸಮಿತಿ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಂತ್ರಸ್ತ ಮಹಿಳೆಯೊಬ್ಬರು ಬಿಜೆಪಿ ನಾಯಕರ ಎದುರು ಕಣ್ಣೀರು ಹಾಕಿದರು. ಇದನ್ನೂ ಓದಿ: ಶಿವಮೊಗ್ಗಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ – ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಾಯಕರು
ಟೈಲ್ಸ್ ಪೀಸ್‌ಗಳನ್ನು ಮೂರು ಚೀಲ ತುಂಬಿಟ್ಟಿದ್ದೇನೆ ಸರ್. 10 ಜನ ಸೇರಿಕೊಂಡು ಒಬ್ಬನನ್ನ ಹೊಡೆದಿದ್ದಾರೆ. ಎಸ್ಪಿಗೆ ಹೊಡೆತ ಬಿದ್ದ ಮೇಲೆ ಲಾಠಿ ಚಾರ್ಜ್ ಮಾಡಿದ್ರು. ನಾವು ಇಲ್ಲಿ ಇರಬೇಕೋ ಬೇಡವೋ ಎನ್ನುವ ಸ್ಥಿತಿ ನಿರ್ಮಾಣ ಆಗಿದೆ. ನಾವಿಲ್ಲಿ ಸಹೋದರ-ಸಹೋದರಿಯರಂತೆ ಇದ್ದೇವೆ ಎಂದು ಸ್ಥಳೀಯರಾದ ಅನಿತಾ ನೋವು ತೋಡಿಕೊಂಡರು.
ನನ್ನ ಪತ್ನಿ ಸುಶೀಲಾ ಉರ್ದು ಶಾಲೆ ಶಿಕ್ಷಕಿ. ಅವಳು ಉರ್ದು ಮಕ್ಕಳಿಗೆ ಕನ್ನಡ ಕಲಿಸಿದ್ದಳು. ನನ್ನ ಪತ್ನಿ ಕಲಿಸಿದ 90% ರಷ್ಟು ಮಕ್ಕಳು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಪಕ್ಕದವರ ಮನೆ ಬಿಟ್ಟು ನಮ್ಮ ಮನೆಗಳನ್ನ ಟಾರ್ಗೆಟ್ ಮಾಡಿದ್ದಾರೆ. ಇವಾಗ ಮಾತಾಡಿದ್ದು ನೋಡಿದ್ರೆ ಮತ್ತೆ ಏನ್ ಮಾಡ್ತಾರೋ ಅನ್ನೋ ಭಯ ಇದೆ ಎಂದು ನಿವೃತ್ತ ಶಿಕ್ಷಕ ದಂಪತಿ ಪ್ರಸನ್ನಕುಮಾರ್ ಕಣ್ಣೀರಿಟ್ಟರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮನೆ ಮೇಲೆ ಇಡಿ ದಾಳಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಶಿವಮೊಗ್ಗದ ರಾಗಿಗುಡ್ಡಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿತು. ಈ ವೇಳೆ ಸ್ಥಳೀಯ ಶಾಸಕ ಚನ್ನಬಸಪ್ಪ, ಮಾಜಿ ಸಚಿವ ಅಶ್ವತ್ಥ್ ನಾರಾಯಣ, ಎಂಎಲ್‌ಸಿ ರವಿಕುಮಾರ್ ಜೊತೆಯಲ್ಲಿದ್ದರು.
Web Stories