ಬೆಂಗಳೂರು: ಬಿಜೆಪಿ (BJP) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ನಿತ್ಯಜಾತಿ ಅಸ್ತ್ರದ ಮಿಸೈಲ್ ಪ್ರಯೋಗ ಮಾಡುತ್ತಿದ್ದಾರೆ. ಮೊದಲು ಬ್ರಾಹ್ಮಣ ಸಿಎಂ ಅಸ್ತ್ರ, ನಂತರ ಯಡಿಯೂರಪ್ಪ (BS Yediyurappa) ಪರ ಬ್ಯಾಟಿಂಗ್, ಲಿಂಗಾಯತ ಸಮುದಾಯವೇ ಬಿಜೆಪಿ ಸೋಲಿಸುತ್ತೆ ಎಂಬ ಹೇಳಿಕೆಗಳನ್ನು ಕೊಡುವ ಮೂಲಕ ಬಿಜೆಪಿಯ ಪ್ರಬಲ ಮತ ವರ್ಗಗಳಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಹೆಚ್‌ಡಿಕೆ ಅವರ ಈ ಜಾತಿ ಅಟ್ಯಾಕ್‌ಗೆ ಬಿಜೆಪಿಯಲ್ಲಿ ಗೊಂದಲ ಮನೆ ಮಾಡಿರೋದು ನಿಜವೇ. ಹೀಗಾಗಿಯೇ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ಧ ಬಹಳಷ್ಟು ಬಿಜೆಪಿ ನಾಯಕರು ಕೌಂಟರ್ ಅಟ್ಯಾಕ್ ಮಾಡುತ್ತಿದ್ದಾರೆ.
ಬಿಜೆಪಿಯ ಬಹಳಷ್ಟು ನಾಯಕರು ಹೆಚ್‌ಡಿಕೆ ವಿರುದ್ಧ ಗುಡುಗುತ್ತಿದ್ದರೆ, ಸಚಿವ ಆರ್. ಅಶೋಕ್ ಮಾತ್ರ ಸಾಫ್ಟ್ ರಾಗ ಹಾಡುತ್ತಿದ್ದಾರೆ. ಅಶೋಕ್ ಹೇಳಿ ಕೇಳಿ ಬಿಜೆಪಿಯ ಮುಂಚೂಣಿ ಒಕ್ಕಲಿಗ ನಾಯಕ. ಹೆಚ್‌ಡಿಕೆ ವಿರುದ್ಧ ಕೌಂಟರ್ ಕೊಡುವುದಕ್ಕೆ ಎಲ್ಲರಿಗಿಂತಲೂ ಮುಂಚೆ ನಿಲ್ಲಬೇಕಾಗಿದ್ದವರೇ ಆರ್. ಅಶೋಕ್. ಆದರೆ ಪರಿಸ್ಥಿತಿ ಮಾತ್ರ ವ್ಯತಿರಿಕ್ತವಾಗಿದ್ದು, ಹೆಚ್‌ಡಿಕೆ ಅವರ ಸರಣಿ ಟಾಕ್ ವಾರ್‌ಗೆ ಸಾಮ್ರಾಟ್ ಅಶೋಕ್ ಸಾಫ್ಟ್ ರಿಯಾಕ್ಷನ್ ಮಾತ್ರ ಕೊಡುತ್ತಿದ್ದಾರೆ. ಹೆಚ್‌ಡಿಕೆ ಅಷ್ಟೆಲ್ಲ ಅಟ್ಯಾಕ್ ಮಾಡುತ್ತಿದ್ದರೂ ಅಶೋಕ್ ಮಾತ್ರ ಗಟ್ಟಿಯಾಗಿ ಬಾಯಿ ಬಿಡುತ್ತಿಲ್ಲ.
Advertisement
Advertisement
ನಾಲ್ಕು ದಿನಗಳಾದರೂ ಅಶೋಕ್ (R Ashok) ಅವರು ಹೆಚ್‌ಡಿಕೆಗೆ ತೀಕ್ಷ್ಣವಾಗಿ ತಿರುಗೇಟು ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೇವಲ ಟ್ವೀಟ್‌ನಲ್ಲಿ ಮಾತ್ರ ನಾಮಕಾವಸ್ಥೆಗೆ ಖಂಡನೆ ವ್ಯಕ್ತಪಡಿದ್ದಾರೆ. ಹೆಚ್‌ಡಿಕೆ ಕ್ಷಮೆಗೆ ಅಶೋಕ್ ಆಗ್ರಹಿಸಿದ್ದಾರೆ. ಆದರೆ ಟ್ವೀಟ್‌ನಲ್ಲಿ ಬಳಸಿದ ಶಬ್ದಗಳಲ್ಲೂ ಸತ್ವ ಇಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಆರ್. ಅಶೋಕ್ ಅವರ ಈ ನಡೆಗೆ ಪಕ್ಷದ ಒಳಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಕ್ಷದಲ್ಲಿ ಅಶೋಕ್ ಅವರ ಈ ನಡೆ ಅನುಮಾನ ಮೂಡಿಸಿದೆಯಂತೆ. ಪಕ್ಷ ಸಂಭ್ರಮದ ಸಂದರ್ಭದಲ್ಲಿ ಸಂಭ್ರಮಕ್ಕೆ ಮಾತ್ರ ಒಕ್ಕಲಿಗ ಲೀಡರ್ ಅನಿಸಿಕೊಂಡ್ರೆ ಸಾಕಾ? ಪಕ್ಷಕ್ಕೆ ಸಮಸ್ಯೆ ಬಂದಾಗ, ಟ್ರಬಲ್ ಶೂಟರ್‌ಗೆ ಅಶೋಕ್ ಯಾಕೆ ಮುಂದೆ ಬರುತ್ತಿಲ್ಲ ಅಂತ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ತೇಜಸ್ವಿ ಸೂರ್ಯಗೆ ಅಮಾವಾಸ್ಯೆ ಎಂದು ಕರೆಯುತ್ತೇನೆ: ಸಿದ್ದರಾಮಯ್ಯ
Advertisement
ಈಗಾಗಲೇ ಜೆಡಿಎಸ್ ವಿಚಾರದಲ್ಲಿ ಅಶೋಕ್ ಅವರದ್ದು ಯಾವಾಗಲೂ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಎಂಬ ಮಾತಿದೆ. ಈಗ ಎಚ್ಡಿಕೆ ಬಗ್ಗೆಯೂ ಹಳೆಯ ಅಡ್ಜಡಸ್ಟ್ಮೆಂಟ್ ರಾಗನಾ ಅಂತ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ ಅಭಿಯಾನಕ್ಕೂ ಇದು ಮತ್ತೊಂದು ಇಂಬು ಕೊಟ್ಟಿದೆ ಎನ್ನಲಾಗಿದೆ. ಗೌಡರ ಕುಟುಂಬದ ಬಗ್ಗೆ ಗಟ್ಟಿ ದನಿಯಿಂದ ಮಾತಾಡಿ ಅಶೋಕ್ ಎಂದು ಪಕ್ಷದೊಳಗೆ ಕೂಗು ಎದ್ದಿದೆಯಂತೆ.
Advertisement
ಸ್ವಪಕ್ಷದವರ ಆಕ್ಷೇಪ, ಆಗ್ರಹಕ್ಕೆ ಬೆಲೆ ಕೊಡ್ತಾರಾ ಸಚಿವ ಅಶೋಕ್ ಅನ್ನುವ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಹೆಚ್‌ಡಿಕೆ ವಿರುದ್ಧ ಅಶೋಕ್ ಗುಡುಗುತ್ತಾರಾ ಅಥವಾ ಸಾಫ್ಟ್ ನಡೆ ಮುಂದುವರಿಸ್ತಾರಾ ಅಂತ ಕಾದು ನೋಡಬೇಕಿದೆ. ಹೆಚ್‌ಡಿಕೆ ಬಿರುಗಾಳಿ ಹೇಳಿಕೆಗಳಿಗೆ ಅಶೋಕ್‌ರಿಂದ ಸ್ಟ್ರಾಂಗ್ ರಿಯಾಕ್ಷನ್ ಏನಿರಬಹುದು ಎಂಬ ಕುತೂಹಲವಿದೆ. ಇದನ್ನೂ ಓದಿ: ಸತ್ಯವನ್ನು ಹೇಳಲು ಧೈರ್ಯ ಇಲ್ಲದವನು ರಾಜಕೀಯ ನಪುಂಸಕ- ಹೆಚ್‍ಡಿಕೆ ವಿರುದ್ಧ ಸಿಟಿ ರವಿ ವಾಗ್ದಾಳಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k