ಬೆಂಗಳೂರು: ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆದರಿಕೆ ಮೂಲಕ ಆಪರೇಷನ್ ಕಮಲ ಮಾಡೋ ಯತ್ನ ಮಾಡ್ತಾ ಇದ್ದಾರೆ. ಬೇರೆ ಬೇರೆ ರೀತಿಯ ಆಫರ್ ಗಳನ್ನು ನೀಡಿ ಕಾಂಗ್ರೆಸ್ ಅವರನ್ನು ಸೆಳೆಯಲು ಪ್ರಯತ್ನ ಆಗ್ತಾ ಇದೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
Advertisement
ನಮ್ಮೆಲ್ಲ ಶಾಸಕರು ನಮ್ಮ ಜೊತೆಯಲ್ಲಿ ಇದ್ದಾರೆ. ರಾಜ್ಯಪಾಲರ ಭೇಟಿಯಾಗಲು ಕಾಲಾವಕಾಶ ಕೇಳಿದ್ದೀವಿ. ಕಾಲಾವಕಾಶ ನೀಡಿದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡ್ತೀವಿ ಅಂದ್ರು.
Advertisement
Advertisement
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲು ಸಾಧ್ಯನೇ ಇಲ್ಲ. ಬೆದರಿಕೆ ಮೂಲಕ ನಮ್ಮವರನ್ನು ಎಳೆಯಲು ಪ್ರಯತ್ನ ಮಾಡ್ತಾ ಇದ್ದಾರೆ ಅಂತ ಗಂಭೀರ ಆರೋಪ ಮಾಡಿದ್ರು.
Advertisement
ರಾಜ್ಯಪಾಲರು ಕರೆಯದೆ ಹೇಗೆ ಪ್ರಮಾಣವಚನ ಸ್ವೀಕರಿಸ್ತಾರೆ. ಎಲ್ಲರನ್ನೂ ದಾರಿ ತಪ್ಪಿಸೋದಕ್ಕೆ ಈ ರೀತಿ ಮಾಡ್ತಾ ಇದ್ದಾರೆ ಅಂತ ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
All the MLAs are intact. Some of the MLAs came late because they came in a special flight from Bidar: G Parameshwara, Congress on 12 Congress MLAs not present in the legislative meeting at Karnataka Party Congress Committee office in Bengaluru #KarnatakaElections2018 pic.twitter.com/yxq3jsWHfx
— ANI (@ANI) May 16, 2018