ಬೆಂಗಳೂರು: ಸಮಾಜದಲ್ಲಿ ಎಲ್ಲರಿಗೂ ಬಾಳಿ ಬದುಕುವ ಅವಕಾಶವಿದೆ. ಉತ್ತಮವಾಗಿ ಬದುಕುವವರಿಗೆ ಅವಕಾಶ ಮಾಡಿಕೊಡಬೇಕು. ಎಲ್ಲರಿಗೂ ರೌಡಿ ಶೀಟರ್ (Rowdy Sheeter) ಅಂತ ನಾಮಕರಣ ಮಾಡೋದು ತಪ್ಪು ಎಂದು ಫೈಟರ್ ರವಿ ಮತ್ತು ಸೈಲೆಂಟ್ ಸುನೀಲನ ಬಿಜೆಪಿ (BJP) ಸೇರ್ಪಡೆ ಬಗ್ಗೆ ಪರೋಕ್ಷವಾಗಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Dr. Ashwathnarayan) ಸಮರ್ಥನೆ ಮಾಡಿಕೊಂಡಿದ್ದಾರೆ.
Advertisement
ರೌಡಿ ಶೀಟರ್‌ಗಳನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಎಲ್ಲರಿಗೆ ಅನ್ವಯ. ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದರು ಕ್ರಮ ಆಗುತ್ತೆ. ಕಾನೂನು ಮೀರಿ ಯಾರು ನಡೆಯಲು ಸಾಧ್ಯವಿಲ್ಲ. ಆದ್ರೆ ಎಲ್ಲರಿಗೂ ನಾವು ರೌಡಿ ಶೀಟರ್ ಅಂತ ನಾಮಕರಣ ಮಾಡೋದು ತಪ್ಪು. ಸಮಾಜದಲ್ಲಿ ಎಲ್ಲರಿಗೂ ಬಾಳಿ ಬದುಕಲು ಅವಕಾಶ ಇದೆ. ಉತ್ತಮವಾಗಿ ಬದುಕಲು ಅವಕಾಶ ಕೊಡದೆ ನಿಂದನೆ ಮಾಡಬಾರದು. ಕಾನೂನಿನಲ್ಲಿ ಶಿಕ್ಷೆ ಆಗದಿದ್ದರೆ ಕೇಳಬೇಕು. ತಪ್ಪು-ಒಪ್ಪು ಇಲ್ಲದೆ ಆಪಾದನೆ ಇಲ್ಲದೆ ಬದುಕಲು ಅವಕಾಶ ಮಾಡಿಕೊಡಬೇಕು. ಉತ್ತಮವಾಗಿ ಬದುಕಲು ಕಾನೂನಿನಲ್ಲಿ ಎಲ್ಲರಿಗೂ ಅವಕಾಶ ಇದೆ. ತಪ್ಪು ಮಾಡಿದ್ರೆ ಶಿಕ್ಷೆ ಆಗಿದ್ದರೆ ಯಾರೂ ಕೂಡಾ ಅವರ ಪರವಾಗಿ ಇರುವುದಿಲ್ಲ. ಉತ್ತಮವಾಗಿ ಬದುಕುತ್ತೇನೆ ಎಂದಾಗ ನಾವು ನಿಂದನೆ ಮಾಡಬಾರದು ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಜಕಾರಣಿಗಳ ಮಧ್ಯೆ ರೌಡಿಶೀಟರ್ ಸೈಲೆಂಟ್ ಸುನೀಲನ ದರ್ಬಾರ್ – ಪೊಲೀಸರು ಗಪ್‍ಚುಪ್
Advertisement
Advertisement
ಒಕ್ಕಲಿಗರ (Vokkaliga) ಮೀಸಲಾತಿ (Reservation) ಹೆಚ್ಚಳಕ್ಕೆ ಬೇಡಿಕೆ ವಿಚಾರವಾಗಿ ಮಾತನಾಡಿ, ಒಕ್ಕಲಿಗರ ಮೀಸಲಾತಿ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡಲಾಗುತ್ತದೆ. ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗ ಸಮುದಾಯದ ಒತ್ತಾಯ ಇದೆ. ಸ್ವಾಮೀಜಿಗಳು ಸೇರಿ ಎಲ್ಲರೂ ಒತ್ತಾಯ ಮಾಡಿದ್ದಾರೆ. ಕೇವಲ ಒಕ್ಕಲಿಗ ಸಮುದಾಯ ಮಾತ್ರವಲ್ಲ. ಅನೇಕ ಸಮುದಾಯಗಳು ಮೀಸಲಾತಿ ಹೆಚ್ಚಳದ ಬೇಡಿಕೆ ಇಟ್ಟಿದ್ದಾರೆ. ಎಲ್ಲರ ಬೇಡಿಕೆಗಳನ್ನು ಗಮನಕ್ಕೆ ತೆಗೆದುಕೊಂಡು ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡ್ತೀವಿ. ನಾನು ಸರ್ಕಾರದ ಭಾಗವಾಗಿರುವುದರಿಂದ ವೈಯಕ್ತಿಕ ಅಭಿಪ್ರಾಯ ಹೇಳಲು ಸಾಧ್ಯವಿಲ್ಲ. ಕಾನೂನಿನ ಅವಕಾಶ ಬಳಕೆ ಮಾಡಿ, ಬೇಡಿಕೆ ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಮೀಸಲಾತಿ ಹೆಚ್ಚಳದಲ್ಲಿ ಸರ್ಕಾರ ಯಾವುದೇ ಇಕ್ಕಟ್ಟಿನಲ್ಲಿ ಇಲ್ಲ. ಜನರು ಕೊಟ್ಟ ಅವಕಾಶವನ್ನು ನಾವು ಉಪಯೋಗ ಮಾಡಿಕೊಳ್ಳಬೇಕು. ಎಲ್ಲಾ ವಿಚಾರ ಚರ್ಚೆ ಮಾಡಿ ಏನು ಮಾಡಬೇಕೋ ಅದನ್ನು ಮಾಡ್ತೀವಿ. ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ- ಬಿಜೆಪಿಗೆ ಸುಮಲತಾ ಆಪ್ತ ಸಚ್ಚಿದಾನಂದ ಸೇರ್ಪಡೆ