– ಅಮಿತ್ ಶಾ ವಿರುದ್ಧ ಗುಂಡಾ ಪದಬಳಕೆಗೆ ಬಿಜೆಪಿ ತೀವ್ರ ಖಂಡನೆ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra siddaramaiah) ನೀಡಿದ ವಿವಾದಾತ್ಮಕ ಹೇಳಿಕೆಯನ್ನ ಬಿಜೆಪಿ ನಾಯಕರು (BJP Leaders) ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಯತೀಂದ್ರ ವಿರುದ್ಧ ಕೇಸ್ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance) ಸಮ್ಮಿಲನ ಸಭೆಗೆ ಉಭಯ ಪಕ್ಷಗಳ ನಾಯಕರು ಆಗಮಿಸುತ್ತಿದ್ದಾರೆ. ಸಭೆಗು ಮುನ್ನ ಬಿಜೆಪಿ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಯತೀಂದ್ರ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಒಂದೇ ಕ್ಷೇತ್ರದಲ್ಲಿ ‘ಪನ್ನೀರಸೆಲ್ವಂ’ ಹೆಸರಿನ ಐವರು ಕಣಕ್ಕೆ – ಮಾಜಿ ಸಿಎಂ ಪನ್ನೀರಸೆಲ್ವಂಗೆ ಪೀಕಲಾಟ!
Advertisement
Advertisement
ಯಾರು ಏನ್ ಹೇಳಿದ್ರು?
ಸಿ.ಟಿ ರವಿ:
ಅಪ್ಪನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಹೀಗೆ. ಯತೀಂದ್ರ ಎಂದಾದ್ರೂ ಪಕ್ಷದ ಕೆಲಸ ಮಾಡಿದ್ದಾರಾ? ಅಮಿತ್ ಶಾ1982ರಲ್ಲಿ ಬೂತ್ ಅಧ್ಯಕ್ಷ ಆಗಿದ್ದರು. ಆಗ ಇವರಪ್ಪ ಇನ್ನೂ ಎಂಎಲ್‌ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನಿಂದ ಶಾಸಕ ಆದವರು ಯತೀಂದ್ರ. ಆದ್ರೆ ನಾವು ವಿದ್ಯಾರ್ಥಿಗಳಾಗಿದ್ದಾಗಲೇ ನಾಯಕರಾಗಿದ್ದೆವು. ನಮ್ಮ ಮೇಲೂ ಸುಳ್ಳು ಕೇಸ್ ಹಾಕಿ ಗೂಂಡಾ ಕಾಯ್ದೆ ಹಾಕಿದ್ದರು. ಹಾಗಾದ ಮಾತ್ರಕ್ಕೆ ನಾನೂ ಗೂಂಡಾನಾ? ಅಪ್ಪನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಸಾಮಾನ್ಯ ಕಾರ್ಯಕರ್ತರ ಕಷ್ಟ ಹೇಗೆ ತಿಳಿಯುತ್ತದೆ?
Advertisement
Advertisement
ಆರ್. ಅಶೋಕ್:
ಸಿದ್ದರಾಮಯ್ಯ ಅವರ ಮಗ ಅನ್ನೋ ಕಾರಣಕ್ಕೆ ಯತೀಂದ್ರ ರಾಷ್ಟ್ರೀಯ ನಾಯಕರ ಬಗ್ಗೆ ಮಾತಾಡಿದ್ರೆ ದೊಡ್ಡ ವ್ಯಕ್ತಿ ಆಗಬಹುದು ಅನ್ನೋ ಭ್ರಮೆಯಲ್ಲಿದ್ದಾರೆ. ಅವರಿಗೆ ಜ್ಞಾನ ಕಡಿಮೆ ಇದೆ, ಬುದ್ಧಿ ಭ್ರಮಣೆಯಾಗಿದೆ. ಯಾರ ಬಗ್ಗೆ ಮಾತಾಡಬೇಕು ಅಂತ ಗೊತ್ತಿಲ್ಲ. ಅಮಿತ್ ಶಾ ಗೃಹ ಸಚಿವರಾಗಿ ಕೆಲಸ ಮಾಡ್ತಿದ್ದಾರೆ. ಮೈಸೂರು ರಾಜಕೀಯದ ಬಗ್ಗೆ ಮಾತನಾಡೋಕು ಯೋಗ್ಯತೆ ಇಲ್ಲದ ಯತೀಂದ್ರ, ಅಮಿತ್ ಶಾ ಅವರ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ. ಸಿಎಂ ಮಗ ಅನ್ನೋ ಕಾರಣಕ್ಕೆ ಕೊಬ್ಬಿನ ಹೇಳಿಕೆ ನೀಡೋದು ಸರಿಯಲ್ಲ. ಯತೀಂದ್ರ ವಿರುದ್ಧ ದೂರು ದಾಖಲು ಮಾಡ್ತೀವಿ.
ಸದಾನಂದಗೌಡ:
ಬೈಗುಳದಿಂದ ರಾಜಕೀಯ ಮಾಡೋದಾದ್ರೆ ಬಹಳ ಜನ ರಾಜಕೀಯ ಮಾಡಬೇಕಿತ್ತು. ಕೆಟ್ಟ ಭಾಷೆ ಬಳಕೆ ಮಾಡಿ ಪ್ರಚಾರ ಗಿಟ್ಟಿಸೋ ಸಾಲಿಗೆ ಯತೀಂದ್ರ ಸೇರಿದ್ದಾರೆ. ಮಾತಿನಿಂದ ರಾಜಕೀಯದಲ್ಲಿ ಬೆಳೆಯುತ್ತೇನೆ ಅಂದರೆ ಅದು ಅವರ ರಾಜಕೀಯದ ಕೊನೇ ಮೊಳೆ. 16 ಬಜೆಟ್ ಮಂಡಿಸಿರೋ ಸಿದ್ದರಾಮಯ್ಯ ಅವರ ಅಪ್ಪನ ಬಗ್ಗೆ ಯತೀಂದ್ರ ಮಾತಾಡಲಿ, ಅಮಿತ್ ಶಾ ಬಗ್ಗೆ ಯಾಕೆ ಮಾತನಾಡ್ತಾರೆ. ಇದನ್ನೂ ಓದಿ: ರಾಯ್ ಬರೇಲಿ, ಅಮೇಥಿಯಿಂದ ಸ್ಪರ್ಧಿಸಲು ಗಾಂಧಿ ಕುಟುಂಬ ನಿರಾಸಕ್ತಿ?
ಅಶ್ವಥ್ ನಾರಾಯಣ:
ಯತೀಂದ್ರ ಕೀಳು ಮಟ್ಟದ ಹೇಳಿಕೆ ಕೊಟ್ಡಿದ್ದಾರೆ. ಮಾತಿನ ಮೇಲೆ ನಿಗಾ ಇರಬೇಕು, ಐರನ್ ಮ್ಯಾನ್ ಅಮಿತ್ ಶಾ ಅವರು ದೇಶ ಉಳಿಸೋಕೆ ಕೆಲಸ ಮಾಡ್ತಿದ್ದಾರೆ. ಅವರನ್ನ ಗುಂಡಾ ಅಂತಾರೆ, ಇವರಿಗೆ ಏನಾಗಿದೆ? ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾರಾ? ತಕ್ಷಣ ಕ್ಷಮೆ ಕೇಳಬೇಕು. ಹೇಳಿಕೆ ವಾಪಸ್ ಪಡೆಯಬೇಕು. ಅಮಿತ್ ಶಾ ಅವರು ನೀಡಿರುವ ಕೊಡುಗೆಯನ್ನು ಯತೀಂದ್ರ ಪರಿವಾರ ಎಳ್ಳಷ್ಟು ಕೊಟ್ಟಿಲ್ಲ. ಸಚಿವರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ.
ಯತೀಂದ್ರ ಹೇಳಿದ್ದೇನು?
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಅಮಿತ್ ಶಾ ಓರ್ವ ಗೂಂಡಾ, ರೌಡಿ. ಗುಜರಾತ್‍ನಲ್ಲಿ ನರಮೇಧ ಮಾಡಿದವರು ಯಾರು? ಇಂತಹವರು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಕ್ರಿಮಿನಲ್ ಚಟುವಟಿಕೆಯುಳ್ಳ ಇಂತಹವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿ ಕಾರಿದ್ದರು. ಇದನ್ನೂ ಓದಿ: ರಾಜಕೀಯವಾಗಿ ಜೆಡಿಎಸ್-ಬಿಜೆಪಿ ಮುಖಂಡರು ಪರಸ್ಪರರ ಮೇಲೆ ಹಾಕಿರುವ ಕೇಸ್ ಹಿಂಪಡೆಯಲು ನಿರ್ಧಾರ