ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸ್ಟಾರ್ ನಟರ ಸುತ್ತಲೂ ರಾಜಕಾರಣ ಗಿರಕಿ ಹೊಡೆಯುತ್ತಿದೆ. ಉಪ್ಪಿ ಆಯ್ತು, ದರ್ಶನ್ ಆಯ್ತು ಈಗ ಮತ್ತೊಬ್ಬ ಸ್ಟಾರ್ ನಟ ರಾಜಕೀಯಕ್ಕೆ ಬರ್ತಾರೆಂಬ ಸುದ್ದಿ ಹರಿದಾಡುತ್ತಿದೆ.
ಕಾಂಗ್ರೆಸ್ ಯೋಜನೆಗೆ ತಿರುಗೇಟು ನೀಡಲು ಬಿಜೆಪಿಯೂ ಸಜ್ಜಾಗುತ್ತಿದ್ದು, ಕಿಚ್ಚ ಸುದೀಪ್‍ರನ್ನು ಕರೆಯಲು ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿದೆ. ಬಿಜೆಪಿ ಸೇರಲು ನಟ ಕಿಚ್ಚ ಸುದೀಪ್ ಗೆ ಆಹ್ವಾನ ನೀಡಲು ಕಮಲ ಮನೆಯಲ್ಲಿ ತಯಾರಿ ನಡೆಯುತ್ತಿದೆ. ಕಾಂಗ್ರೆಸ್ ಗೆ ದರ್ಶನ ಆದ್ರೆ ನಮ್ಗೆ ಸುದೀಪ್ ಅಂತಿದೆ ಬಿಜೆಪಿ ಪಕ್ಷ.
Advertisement
Advertisement
ಶ್ರೀರಾಮುಲು, ಆರ್.ಅಶೋಕ್ ಗೆ ಸುದೀಪ್ ಜೊತೆ ಮಾತುಕತೆ ನಡೆಸುವ ಜವಾಬ್ದಾರಿ ನೀಡಿದ್ದು, ಸುದೀಪ್ ಪಕ್ಷ ಸೇರಿದ್ರೆ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗುತ್ತೆ ಅಂತ ಹೇಳಲಾಗ್ತಿದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ದರ್ಶನ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ರೆ ಬಿಜೆಪಿಯಿಂದ ಸುದೀಪ್‍ಗೆ ಟಿಕೆಟ್ ನೀಡಲಾಗುತ್ತಾ ಎಂಬ ಚರ್ಚೆಯೂ ಎದ್ದಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಸುದೀಪ್ ಮನವೊಲಿಸಲು ಬಿಜೆಪಿ ಯೋಜನೆ ಹಾಕುತ್ತಿದೆ.
Advertisement
ಇದನ್ನೂ ಓದಿ: ಕಾಂಗ್ರೆಸ್‍ಗೆ ಸೇರ್ಪಡೆಯಾಗ್ತೀರಾ: ಮಾಧ್ಯಮಗಳ ಪ್ರಶ್ನೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು
Advertisement
ವಿಧಾನಸಭಾ ಚುನಾವಣೆಗೆ ನಿಲ್ಲಬೇಕು ಅಂದ್ರೆ ಬೆಂಗಳೂರಿನ ವಿಧಾನಸಭಾ ಕ್ಷೇತ್ರವೊಂದರಲ್ಲಿ ಸುದೀಪ್‍ಗೆ ಟಿಕೆಟ್ ಅಂತೆಲ್ಲ ರಾಜ್ಯ ಬಿಜೆಪಿಯಲ್ಲಿ ಒಂದು ಸುತ್ತಿನ ಮಾತುಕತೆ ಈಗಾಗಲೇ ನಡೆದಿದೆ. ಆದ್ರೆ ರಾಜಕೀಯ ಸಹವಾಸ ಬೇಡ ಅಂತಾ ಆಪ್ತರ ಬಳಿ ಹೇಳಿದ್ದ ಸುದೀಪ್, ಈಗ ಬಿಜೆಪಿ ಪ್ರಸ್ತಾಪಕ್ಕೆ ಓಕೆ ಅಂತಾರಾ ಅಥವಾ ರಾಜಕೀಯ ಸೇರಲು ಗ್ರೀನ್ ಸಿಗ್ನಲ್ ಕೊಡ್ತಾರಾ? ಮೋದಿಗೆ ಜೈ ಅಂದು ಲೋಕಸಭೆಗೆ ಸ್ಪರ್ಧೆ ಮಾಡಲು ಒಪ್ಪುತ್ತಾರಾ? ಅಂತ ಕಾದುನೋಡಬೇಕು.