ಲಕ್ನೋ: ಮುಸ್ಲಿಮರ ಪ್ರಾರ್ಥನೆಯನ್ನು (ಕಲಿಮಾ) ಪಠಿಸುವ ಸಂಬಂಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ನಾಯಕರು ಗಂಗಾ ಜಲ ಬಳಸಿ ಶಾಲೆ ಆವರಣವನ್ನು ಶುದ್ಧೀಕರಿಸಿದ ಘಟನೆ ನಡೆದಿದೆ.
ಪ್ರತಿಭಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಕಾನ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ ಅಯ್ಯರ್ ಅವರು ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ಶಾಲೆ ಹಾಗೂ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳನ್ನು ಭೇಟಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗೆ ತಿಳಿಸಲಾಗಿದೆ. ಇದನ್ನೂ ಓದಿ: ಹರ್ ಹರ್ ಶಂಭು ಹಾಡಿಗೆ ಅಪಸ್ವರ – ಮುಸ್ಲಿಮಳಾಗಿ ಆ ಹಾಡನ್ನು ಹಾಡಬಾರದು ಎಂದ ದಿಯೋಬಂದ್
Advertisement
Advertisement
ವಿದ್ಯಾರ್ಥಿಗಳು ಕಳೆದ 12-13 ವರ್ಷಗಳಿಂದ ಹಿಂದೂ, ಸಿಖ್, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಪ್ರಾರ್ಥನೆಗಳನ್ನು ಪಠಿಸುವ ಪರಿಪಾಠವಿತ್ತು. ಅದನ್ನು ಶಾಲೆಯ ಪ್ರಾಂಶುಪಾಲರಾದ ಸುಮಿತ್ ಮಖಿಜಾ ಅವರು ನಿರ್ವಹಿಸಿಕೊಂಡು ಬಂದಿದ್ದಾರೆ. ಈ ಕುರಿತು ಈಗಾಗಲೇ ಒಮ್ಮೆ ಅವರೊಂದಿಗೆ ಮಾತನಾಡಿದ್ದೇವೆ. ಆದರೆ ಮತ್ತೊಮ್ಮೆ ಸಂಪರ್ಕಿಸಿದಾಗ, ಮಾಹಿತಿ ನೀಡಲು ಅವರು ಲಭ್ಯವಾಗುತ್ತಿಲ್ಲ ಸಹಾಯಕ ಪೊಲೀಸ್ ಕಮಿಷನರ್ ನಿಶಾಂಕ್ ವರ್ಮಾ ತಿಳಿಸಿದ್ದಾರೆ.
Advertisement
ಶಾಲೆಯಲ್ಲಿ ಎಲ್ಲಾ ಧರ್ಮಗಳ ಪ್ರಾರ್ಥನೆಗೆ ಆರಂಭದಲ್ಲಿ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಇತ್ತೀಚೆಗೆ ಪೋಷಕರೊಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದಾದ ಬಳಿಕ ಶಾಲೆಯು ಎಲ್ಲಾ ಧರ್ಮಗಳ ಪ್ರಾರ್ಥನೆಗಳನ್ನು ಕೈಬಿಡಲು ನಿರ್ಧರಿಸಿತು. ರಾಷ್ಟ್ರಗೀತೆ ಹಾಡುವುದನ್ನು ಮಾತ್ರ ಕಡ್ಡಾಯಗೊಳಿಸಲಾಗಿದೆ ಎಂದು ಶಾಲಾ ಪ್ರಾಂಶುಪಾಲರು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾಲ್ವರು ಸಂಸದರ ಅಮಾನತು ಹಿಂಪಡೆದ ಸ್ಪೀಕರ್
Advertisement
ವಿವಾದ ಏನು?
ಕಾನ್ಪುರ ಶಾಲೆಯಲ್ಲಿ ಸರ್ವಧರ್ಮಗಳ ಪ್ರಾರ್ಥನೆಯನ್ನು ಹಾಡಿಸಲಾಗುತ್ತಿತ್ತು. ಈ ಪ್ರಾರ್ಥನೆಯನ್ನು ಗಾಯತ್ರಿ ಮಂತ್ರದೊಂದಿಗೆ ಆರಂಭಿಸಲಾಗುತ್ತಿತ್ತು. ಆದರೆ ಮುಸ್ಲಿಮರ ಪ್ರಾರ್ಥನೆಗೆ ವಿಶ್ವ ಹಿಂದೂ ಪರಿಷತ್‌ನವರು ವಿರೋಧ ವ್ಯಕ್ತಪಡಿಸಿದ್ದರು. ವಿವಾದದ ಬಳಿಕ ಇದನ್ನು ನಿಲ್ಲಿಸಲಾಗಿತ್ತು.
ಪ್ರಾರ್ಥನೆಗೆ ಸಂಬಂಧಿಸಿದಂತೆ ಶಾಲೆ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿನಿಯನ್ನು ಆಕೆಯ ಪೋಷಕರು ಪ್ರಶ್ನಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಟ್ಯಾಗ್ ಮಾಡಿ ವೈರಲ್ ಮಾಡಲಾಗಿತ್ತು.
ಸ್ಥಳೀಯ ಬಿಜೆಪಿ ಮುಖಂಡರಾದ ಮಹೇಂದ್ರ ಶುಕ್ಲಾ ಮತ್ತು ಧೀರಜ್ ಸಾಹು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಶಾಲೆಯ ಆವರಣವನ್ನು ಗಂಗಾಜಲದಿಂದ ಶುದ್ಧೀಕರಿಸಲಾಗಿದೆ. ಆಡಳಿತ ಮಂಡಳಿಯವರು ವಿದ್ಯಾರ್ಥಿಗಳನ್ನು ಕಲಿಮಾ (ಮುಸ್ಲಿಂ ಪ್ರಾರ್ಥನೆ) ಪಠಿಸುವಂತೆ ಮಾಡುವುದು ಹೇಗೆ? ಇದು ಸಮರ್ಥನೀಯವಲ್ಲ ಎಂದು ಶುಕ್ಲಾ ಆಕ್ಷೇಪ ವ್ಯಕ್ತಪಡಿಸಿದ್ದರು.