ಬೆಂಗಳೂರು: ಮುಡಾ ಹಗರಣ (MUDA Scam Case) ಸಂಬಂಧ ಹೈಕೋರ್ಟ್ ತೀರ್ಪು ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆ ಕೂಗು ಜೋರಾಗಿದೆ. ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ (BJP Protest) ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಪ್ರತಿಭಟನೆ ಹದ್ದು ಮೀರದಂತೆ ತಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯನವ್ರೆ ದೊಡ್ಡ ಮನಸು ಮಾಡಿ ರಾಜಾರೋಷವಾಗಿ ರಾಜೀನಾಮೆ ಕೊಡಿ: ಜಗ್ಗೇಶ್
Advertisement
Advertisement
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸಿ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿದರು. ಈ ವೇಳೆ ವಿಧಾನಸೌಧಕ್ಕೆ ಬೀಗ ಹಾಕಲು ಮುಂದಾದರು. ಆದರೆ ವಿಪಕ್ಷಗಳ ನಾಯಕರ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಸಿದರು.
Advertisement
ಪೊಲೀಸರ ಕಣ್ಣು ತಪ್ಪಿಸಿ ಬೀಗ ಹಾಕಲು ಅರವಿಂದ್ ಬೆಲ್ಲದ್ ಯತ್ನಿಸಿದರು. ಪೊಲೀಸರ ಕಣ್ತಪ್ಪಿಸಿ ದ್ವಾರಕ್ಕೆ ಬೀಗ ಹಾಕಲು ಕಸರತ್ತು ನಡೆಸಿದರು. ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮೆಗಾ ಡ್ರಾಮಾವೇ ನಡೆಯಿತು. ಆಗ ಪೊಲೀಸರೇ ಬಾಗಿಲು ಮುಚ್ಚಿ ಬೆಲ್ಲದ್ ಅವರನ್ನು ತಡೆದರು. ಕೊನೆಗೆ ಪ್ರತಿಭಟನಾಕಾರರನ್ನು ಬಸ್‌ನಲ್ಲಿ ತುಂಬಿಕೊಂಡು ಪೊಲೀಸರು ಹೊರಟರು. ಇದನ್ನೂ ಓದಿ: MUDA Case; ಪ್ರಕರಣದ ಆದೇಶವನ್ನೇ ರದ್ದು ಮಾಡಿಸುವ ಅವಕಾಶ ಕಾನೂನಿನಲ್ಲಿದೆ: ಹಿರಿಯ ವಕೀಲ ವೇಣುಗೋಪಾಲ್
Advertisement
ಡಕೋಟಾ ಬಸ್‌ನಲ್ಲಿ ಬಿಜೆಪಿಯವರನ್ನು ಕರೆದೊಯ್ಯುತ್ತಿದ್ದಾರೆ ಅಂತಾ ಮಾಜಿ ಸಂಸದ ಮುನಿಸ್ವಾಮಿ ಆರೋಪಿಸಿದರು. ಬಿಎಂಟಿಸಿ ಬಸ್‌ಗೆ ಬ್ರೇಕ್ ಇಲ್ಲ, ಹಾರ್ನ್ ಇಲ್ಲ, ಒಡೆದ ಗ್ಲಾಸ್ ಇದೆ. ನಮಗೆ ಏನಾದರೂ ಅವಘಡ ಆಗಲಿ ಅಂತಾನೇ ಉದ್ದೇಶಪೂರ್ವಕವಾಗಿ ಈ ಬಸ್‌ನಲ್ಲಿ ಕರ್ಕೊಂಡು ಹೋಗ್ತಿದ್ದಾರೆ. ಈ ಬಸ್‌ನ ಹಾಗೆ ಸರ್ಕಾರವೂ ಲಡಾಸ್ ಆಗಿದೆ ಎಂದು ವಾಗ್ದಳಿ ನಡೆಸಿದರು.
ಮುನಿಸ್ವಾಮಿ ಆರೋಪ
ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಗೋವಿಂದ ಕಾರಜೋಳ, ಛಲವಾದಿ ನಾರಾಯಣಸ್ವಾಮಿ, ಸುನೀಲ್ ಕುಮಾರ್, ರವಿಕುಮಾರ್, ಜಗ್ಗೇಶ್, ಬೆಲ್ಲದ್, ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ಆರಗ ಜ್ಞಾನೇಂದ್ರ, ಹರೀಶ್ ಪೂಂಜಾ, ಗೋಪಾಲಯ್ಯ, ಮಹೇಶ್ ತೆಂಗಿನಕಾಯಿ, ಬಿ ಪಿ ಹರೀಶ್, ಸಿ.ಪಿ.ಯೋಗೇಶ್ವರ್, ಯಶ್‌ಪಾಲ್ ಸುವರ್ಣ ಸೇರಿ ಬಿಜೆಪಿ ಜೆಡಿಎಸ್‌ನ 55 ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದರು. ಇದನ್ನೂ ಓದಿ: ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ: ದೂರುದಾರ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ವಿರುದ್ಧದ ಪ್ರತಿಭಟನೆಗೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಗೈರಾಗಿದ್ದರು. ದೋಸ್ತಿಗಳ ಪ್ರತಿಭಟನೆ ಎನ್ನಲಾಗಿತ್ತು. ಆದರೆ ಜೆಡಿಎಸ್ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ.