BJP ಸಚಿವರು, ಶಾಸಕರ ಹೆಂಡ್ತೀರು ಬುರ್ಖಾ ಹಾಕಿ ಮುಸ್ಲಿಮರ ಬೀದಿಗೆ ಹೋದ್ರು ವೋಟ್ ಬೀಳಲ್ಲ: ಮುತಾಲಿಕ್

Public TV
2 Min Read
MUTHALIK

-ಕಾಂಗ್ರೆಸ್ ನಾಯಕರ ಮಕ್ಕಳು, ಮೊಮ್ಮಕ್ಕಳು ಮುಂದೆ ಮುಸ್ಲಿಮರಾಗುತ್ತಾರೆ

ಚಿಕ್ಕಮಗಳೂರು: ಬಿಜೆಪಿಯ ಸಚಿವರು, ಶಾಸಕರ ಹೆಂಡತಿಯರು ಬುರ್ಖಾ ಹಾಕಿಕೊಂಡು ಮುಸ್ಲಿಮರ ಏರಿಯಾಗಳಿಗೆ ಹೋದರೂ ಬಿಜೆಪಿಗೆ ಒಂದೇ ಒಂದು ವೋಟು ಬರುವುದಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

Munirathna BJP Road Show 3

ಚಿಕ್ಕಮಗಳೂರಿನಲ್ಲಿ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ನಾಯಕರು ಇರುವುದೇ ಮುಸ್ಲಿಮರಿಗಾಗಿ, ಅವರ ಓಲೈಕೆಗಾಗಿ. ನಾಳೆ ಅವರ ಮಕ್ಕಳು, ಮೊಮ್ಮಕ್ಕಳು ಮುಸ್ಲಿಮರಾಗುತ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಈಗ ಮಾತ್ರ ಅಧಿಕಾರದ ದಾಹ ತೀರಿಸಿಕೊಳ್ಳಲು ಅವರ ಓಲೈಕೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗರ ಗಟ್ಟಿತನ ಇಂದು ಬಿಜೆಪಿಯವರಲ್ಲಿ ಕಾಣುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು. ಇದನ್ನೂ ಓದಿ: ಕತ್ತಿ, ಖಡ್ಗ, ತಲ್ವಾರ್ ಒಂದು ಶಸ್ತ್ರ ಮನೆಯಲ್ಲಿ ಇರಲೇಬೇಕು: ಮುತಾಲಿಕ್

congress logo 1

ದತ್ತಪೀಠದಲ್ಲಿ ಕೂಡಲೇ ಹಿಂದೂ ಅರ್ಚಕರನ್ನು ನೇಮಿಸಿ ರಾಜ್ಯದಲ್ಲಿ ಒಂದು ಒಳ್ಳೆಯ ವಾತಾವರಣ ನಿರ್ಮಿಸಿ ಎಂದು ಬಿಜೆಪಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮೊನ್ನೆ ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಪ್ರಕರಣ, ಸಾರ್ವಜನಿಕ ಗಣೇಶೋತ್ಸವದ ಸಂದರ್ಭ ಹಾಗೂ ದತ್ತಪೀಠದ ವಿಚಾರದಲ್ಲೇ ಇರಬಹುದು, ಎಲ್ಲೋ ಒಂದು ಕಡೆ ಬಿಜೆಪಿಯವರು ನಮಗೂ ಮುಸ್ಲಿಮರ ವೋಟು ಸಿಗಬಹುದು ಎಂದು ಸೆಕ್ಯುಲರ್ ಆಗಲು ಹೊರಟಿದ್ದಾರೆ ಎಂದು ಅನಿಸುತ್ತಿದೆ. ಇಂದಿನ ಶಾಸಕರು ಮಂತ್ರಿಗಳ ಹೆಂಡತಿಯರು ಬುರ್ಕಾ ಹಾಕಿಕೊಂಡು ಮುಸ್ಲಿಮರ ಏರಿಯಾದಲ್ಲಿ ಓಡಾಡಿದರೂ ನಿಮಗೆ ಒಂದು ವೋಟು ಬೀಳಲ್ಲ ಎಂದು ನಾನು ಹೇಳುತ್ತೇನೆ. ಅದಕ್ಕೆ ಹಿಂದೂಗಳು ನಿಮ್ಮನ್ನು ಗೆಲ್ಲಿಸಿದ್ದೇವೆ. ಹಿಂದೂಗಳಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು

DATTAPITA 3

ಜಮ್ಮು-ಕಾಶ್ಮೀರದ ಶ್ರೀನಗರ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, 370ನೇ ವಿಧಿ ರದ್ದಾದ ಬಳಿಕ ಹಾಗೂ ತಾಲಿಬಾನ್ ಅಘ್ಘಾನಿಸ್ಥಾನವನ್ನು ವಶಕ್ಕೆ ಪಡೆದ ಬಳಿಕ ಜಮ್ಮು-ಕಾಶ್ಮೀರ ಆಂತರಿಕ ಭಯೋತ್ಪಾದಕರು ಮತ್ತೆ ಬಾಲ ಬಿಚ್ಚಿದ್ದಾರೆ. ಒಂದೇ ವಾರದಲ್ಲಿ 7 ಜನ ಹಿಂದೂಗಳ ಕೊಲೆ ಆಗಿದೆ. ಒಂದೇ ವರ್ಷಕ್ಕೆ 28 ಜನ ಹಿಂದೂಗಳ ಕೊಲೆಯಾಗಿದೆ. ಅವರಲ್ಲಿ ಮುಗ್ಧರು, ವೈದ್ಯರು, ಶಿಕ್ಷಕರಿದ್ದಾರೆ. ಹತಾಶರಾಗಿ ಈ ರೀತಿ ಕೊಲೆ ಮಾಡುವ ಮೂಲಕ 370 ವಿಧಿಯ ಸೇಡನ್ನು ತೀರಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಕೂಡಲೇ ಇಂತವರನ್ನು ಹುಡುಕಿ-ಹುಡುಕಿ ಹೊಡೆಯಬೇಕು, ಹೊಡೀತಿದೆ. ಆದರೆ, ತಾಲಿಬಾನಿನ ಪ್ರಕ್ರಿಯೆ ನಂತರದ ಬೆಳವಣಿಗೆ ಸರಿಯಾದ್ದಲ್ಲ, ಅಪಾಯಕಾರಿ ಇದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಹದ್ದುಬಸ್ತಿನಲ್ಲಿ ಇಡಬೇಕೆಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *