ಬೆಂಗಳೂರು: ನಗರದ ಆನೇಕಲ್ ಬಿಜೆಪಿ ಮುಖಂಡ ಹರೀಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜು ಅಲಿಯಾಸ್ ರಾಜೇಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
- Advertisement -
ಆನೇಕಲ್ ತಾಲೂಕು ಬಿಜೆಪಿಯ ಎಸ್‍ಸಿ-ಎಸ್‍ಟಿ ಘಟಕದ ಉಪಾಧ್ಯಕ್ಷ ಹರೀಶ್‍ರನ್ನು ಗುರುವಾರ ತಡರಾತ್ರಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ 9.15ರ ಸುಮಾರಿನಲ್ಲಿ ರಾಜೇಶ್ ನನ್ನು ಪೊಲೀಸರು ಮುತ್ಯಾಲಮಡುವಿನ ಚೆಕ್ ಪೋಸ್ಟ್ ಬಳಿ ಸುತ್ತುವರಿದು ಶರಣಾಗತಿಯಾಗುವಂತೆ ಡಿವೈಎಸ್‍ಪಿ ಎಸ್‍ಕೆ ಉಮೇಶ್ ತಂಡ ಸೂಚಿಸಿತು. ಆದರೆ ರಾಜೇಶ್ ಶರಣಾಗತಿಗೆ ನಿರಾಕರಿಸಿ ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದ.
- Advertisement -
- Advertisement -
ಪಿಎಸ್‍ಐ ಹೇಮಂತ್ ಕುತ್ತಿಗೆಗೆ ಚೈನ್ ಹಾಕಿ ಬಿಗಿಯತೊಡಗಿದ. ಇದರಿಂದ ಒಂದು ಕ್ಷಣ ಗಾಬರಿಯಾದ ಪೊಲೀಸರು ಮತ್ತೊಮ್ಮೆ ಶರಣಾಗುವಂತೆ ಎಚ್ಚರಿಸಿದ್ರು. ಯಾವುದಕ್ಕೂ ಬಗ್ಗದಿದ್ದಾಗ ಡಿವೈಎಸ್‍ಪಿ ಉಮೇಶ್ ಗಾಳಿಯಲ್ಲಿ ಗುಂಡು ಹಾರಿಸಿದರು. ಆಗಲೂ ಬಗ್ಗದಿದ್ದಾಗ ರಾಜೇಶ್ ನ ಬಲಗಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ.
- Advertisement -