– ಸಾಮಾಜಿಕ ಜಾಲತಾಣದಲ್ಲಿ ನಾಯಕರ ಟ್ರೋಲ್
ನವದೆಹಲಿ: ಖ್ಯಾತ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ಅವರು ಸೋಮವಾರದಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆದ್ದರಿಂದ ನೆಟ್ಟಿಗರು ಹೇರ್ ಸ್ಟೈಲಿಸ್ಟ್ ಪಕ್ಷ ಸೇರಿದ ಮೇಲೆ ನಾಯಕರ ಹೇರ್ ಸ್ಟೈಲ್ ಬದಲಾಗಿದೆ ಎಂದು ಬಿಜೆಪಿ ನಾಯಕರ ಫೋಟೋಗಳನ್ನು ವಿವಿಧ ರೀತಿ ಎಡಿಟ್ ಮಾಡಿ ಬೇಜಾನ್ ಕಾಲೆಳೆಯುತ್ತಿದ್ದಾರೆ.
Advertisement
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರು ವಿವಿಧ ಹೇರ್ ಸ್ಟೈಲ್ ಮಾಡಿಕೊಂಡಿರುವ ಹಾಗೆ ಫೋಟೋಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಅದರಲ್ಲೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕೂಲ್ ಹೇರ್ ಸ್ಟೈಲ್ ಎಡಿಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Advertisement
When a hairstylist joins BJP.@BJP4India#JavedHabib #Elections2019 pic.twitter.com/6pg0crT33C
— Deepali Saxena (@deepalisaxenas) April 22, 2019
Advertisement
ಮೋದಿ, ಅಮಿತ್ ಶಾ, ಯುಪಿ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರ ಫೊಟೋಗಳಿಗೆ ವಿವಿಧ ಹೇರ್ ಸ್ಟೈಲ್ ಮಾಡಿಕೊಂಡಿರುವ ರೀತಿ ಎಡಿಟ್ ಮಾಡಿ ಕಮಲ ನಾಯಕರಿಗೆ ನೆಟ್ಟಿಗರು ಸ್ಮಾರ್ಟ್ ಲುಕ್ ನೀಡಿದ್ದಾರೆ.
Advertisement
#JavedHabib joins #bjp ????✌ pic.twitter.com/5pyZi83yME
— Faijal Khan (@faijalkhantroll) April 22, 2019
ಜಾವೇದ್ ಹಬೀಬ್ ಅವರು ಭಾರತದಲ್ಲೇ ಖ್ಯಾತ ಹೇರ್ ಸ್ಟೈಲಿಸ್ಟ್ ಆಗಿದ್ದು, ದೇಶದಲ್ಲಿ 100 ನಗರಗಳಲ್ಲಿ 800ಕ್ಕೂ ಅಧಿಕ ಬ್ಯೂಟಿ ಹಾಗೂ ಹೇರ್ ಸಲೂನ್‍ಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ಸೋಮವಾರದಂದು ಬಿಜೆಪಿಗೆ ಸೇರಿ, ಮೋದಿ ಅವರು ಆರಂಭಿಸಿದ್ದ `ಮೈ ಭಿ ಚೌಕಿದಾರ್’ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
#JavedHabib joins #bjp ????✌ pic.twitter.com/I9chohoUGZ
— Faijal Khan (@faijalkhantroll) April 22, 2019