– ಕಚೇರಿಯಲ್ಲಿ 4 ಗಂಟೆಗಳ ಮ್ಯಾರಥಾನ್ ಸಭೆ
– ಯತ್ನಾಳ್ ವಿರುದ್ಧ ಕ್ರಮಕೈಗೊಂಡರೆ ಎಲ್ಲವೂ ಸರಿಯಾಗುತ್ತೆ
ಬೆಂಗಳೂರು: ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ (Tarun Chugh) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯತ್ನಾಳ್ ಉಚ್ಛಾಟನೆಗೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
Advertisement
Advertisement
ಕರ್ನಾಟಕ ಬಿಜೆಪಿ ಆಂತರಿಕ ಸಂಘರ್ಷಕ್ಕೆ ಮದ್ದು ಅರೆಯಲು ಕೇಂದ್ರ ನಾಯಕರು ಮುಂದಾಗಿದ್ದಾರೆ. ಈ ಸಂಬಂಧ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಚುಗ್ ರಾಜ್ಯಕ್ಕೆ ಆಗಮಿಸಿದ್ದು, ಸರಣಿ ಸಭೆಗಳನ್ನು ನಡೆಸಿದರು. ಇಂದು (ಡಿ.03) ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ, ಸಮಿತಿಗಳ ಸಭೆ ನಡೆಯಿತು.ಇದನ್ನೂ ಓದಿ: ವಿಜಯೇಂದ್ರ ಕೆಳಗಿಳಿಸಿ ಪಕ್ಷ ಉಳಿಸಿ – ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಅನಾಮಧೇಯ ಪತ್ರ
Advertisement
Advertisement
ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ವಿದ್ಯಮಾನಗಳು, ಬೈ ಎಲೆಕ್ಷನ್ ಸೋಲು, ಪಕ್ಷ ಸಂಘಟೆ ಸಂಘಟನೆ ಮತ್ತಿತರ ವಿಚಾರಗಳ ಬಗ್ಗೆ 4 ಗಂಟೆಗಳ ಮ್ಯಾರಥಾನ್ ಸಭೆ ನಡೆದಿದೆ. ದೆಹಲಿಗೆ ತೆರಳಿರುವ ಚುಗ್ ಇಂದಿನ ಸಭೆ ಬಗ್ಗೆ ಪಕ್ಷದೊಳಗಿನ ಆಂತರಿಕ ಸಂಘರ್ಷದ ಬಗ್ಗೆ ವಿವರವಾಗಿ ಮಾಹಿತಿ ಸಂಗ್ರಹಿಸಿ, ಹೈಕಮಾಂಡ್‌ಗೆ (High Command) ರಿಪೋರ್ಟ್ ಸಲ್ಲಿಸಲಿದ್ದಾರೆ.
“ಪಕ್ಷ ಬಲವರ್ಧನೆಗಾಗಿ
ಸಂಘಟನಾ ಪರ್ವ ಅಭಿಯಾನ”
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @tarunchughbjp ಅವರ ಸಮ್ಮುಖದಲ್ಲಿ ಬಿಜೆಪಿ ಸಂಘಟನಾ ಪರ್ವ ಅಭಿಯಾನದ ವಿಶೇಷ ಸಭೆ ನಡೆಸಲಾಯಿತು. ಕಾರ್ಯಕರ್ತರ ಕಠಿಣ ಪರಿಶ್ರಮದಿಂದ ದಾಖಲೆಯ ಪ್ರಮಾಣದ ಸದಸ್ಯತ್ವ ನೋಂದಣಿಯಾಗಿದ್ದು ಸದ್ಯ… pic.twitter.com/l9JxM5JZRO
— Vijayendra Yediyurappa (@BYVijayendra) December 3, 2024
ಇದಕ್ಕೂ ಮುನ್ನ ತರುಣ್ ಚುಗ್, ಸಕ್ರಿಯ ಸದಸ್ಯತ್ವ ಸಮಿತಿಗಳು, ಜಿಲ್ಲಾಧ್ಯಕ್ಷರು, ಮಂಡಲ, ಬೂತ್ ಸಮಿತಿಗಳ ಪ್ರಮುಖರ ಜೊತೆ ಸಭೆ ನಡೆಸಿದರು. ಯತ್ನಾಳ್ ವಿರುದ್ಧ ಕ್ರಮ ಕೈಗೊಂಡರೆ ಎಲ್ಲವೂ ಸರಿಹೋಗತ್ತದೆ ಎಂದು ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಒಕ್ಕೊರಲ ಒತ್ತಾಯ ಮಾಡಿದ್ದಾರೆ. ಆದರೆ ತರುಣ್ ಚುಗ್ ಮಾತ್ರ ಇವತ್ತು ಯತ್ನಾಳ್ ವಿಷಯ ಚರ್ಚಿಸದೆ ಕೇವಲ ಪಕ್ಷ ಸಂಘಟನೆ ಬಗ್ಗೆ ಮಾತ್ರ ಒತ್ತುಕೊಟ್ಟಿದ್ದಾರೆ. ಡಿಸೆಂಬರ್ 7ಕ್ಕೆ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಬರಲಿದ್ದಾರೆ.
ನಡೆದ ಸರಣಿ ಸಭೆಗಳ ಮೊದಲ ಸಭೆಯಲ್ಲಿಯೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಉಚ್ಛಾಟನೆಗೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಸಭೆಯಲ್ಲಿದ್ದ ಶಾಸಕರು, ಮಾಜಿಗಳು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರುಗಳು ಒಕ್ಕೊರಲ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಯತ್ನಾಳ್ ಮತ್ತವರ ತಂಡದಿಂದ ಅಡ್ಡಿಯಾಗುತ್ತಿದೆ. ಅವರ ವಿರುದ್ಧ ಕ್ರಮ ಕೈಗೊಂಡರೆ ಎಲ್ಲವೂ ಸರಿಯಾಗುತ್ತದೆ. ಕಳೆದ ಮೂರು ವರ್ಷಗಳಿಂದಲೂ ಯತ್ನಾಳ್ ಪಕ್ಷದ ಶಿಸ್ತು, ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಪಕ್ಷದ ನಾಯಕತ್ವ ವಿರುದ್ಧವೇ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮೊದಲು ಯತ್ನಾಳ್ ಉಚ್ಛಾಟನೆ ಮಾಡಲೇಬೇಕೆಂದು ಪಟ್ಟು ಹಿಡಿದರು.
ಯತ್ನಾಳ್ ತಂಡದಿಂದ ಜಿಲ್ಲಾಧ್ಯಕ್ಷರುಗಳಿಗೆ ತೊಂದರೆ ಆಗುತ್ತಿದೆ. ಈ ವೇಳೆ ಬಿಜೆಪಿಯ (BJP) 32 ಜಿಲ್ಲಾಧ್ಯಕ್ಷರ ಸಹಿ ಇರುವ ಪತ್ರ ತೋರಿಸಿ ಜೆಪಿ ನಡ್ಡಾಗೆ ಹೆಸರಿಗೆ ಪತ್ರ ಬರೆದಿದ್ದೇವೆ. ನೀವು ಅವರಿಗೆ ನೀಡಬೇಕು. ತಳಮಟ್ಟದ ಸಂಘಟನೆಯಲ್ಲಿ ಯತ್ನಾಳ್ ಗೊಂದಲ ಮೂಡಿಸುತ್ತಿದ್ದಾರೆ. ಇತ್ತೀಚಿನ ಪಕ್ಷದೊಳಗೆ ವಿದ್ಯಮಾನಗಳು ನಮಗೆ ಆಘಾತ ತಂದಿವೆ. ರಾಜ್ಯಾಧ್ಯಕ್ಷರ ಮೇಲೆ ಬಹಿರಂಗ ಹೇಳಿಕೆಗಳನ್ನು, ನಿತ್ಯ ಟೀಕೆ ಮಾಡುತ್ತಿದ್ದಾರೆ. ಬಿವೈವಿಯವರು ಉತ್ತಮವಾಗಿ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ಅವರು ರಾಜ್ಯಾಧ್ಯಕ್ಷರಾದ ಬಳಿಕ 2023ರ ವಿಧಾನಸಭಾ ಚುನಾವಣೆ ಸೋಲಿನ ನಂತರ ಪಕ್ಷದಲ್ಲಿದ್ದ ನಿರಾಶೆಯ ಭಾವನೆಯಿಂದ ಹೊರಬರಲು ಎಲ್ಲರಿಗೂ ಸಾಧ್ಯವಾಗಿದೆ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯತ್ನಾಳ್ ಸಾರ್ವಜನಿಕವಾಗಿ ಪಕ್ಷದ ವರ್ಚಸ್ಸು, ವಿಶ್ವಾಸಾರ್ಹತೆ ಮತ್ತು ಪ್ರತಿಷ್ಠೆಗೆ ಪದೇ ಪದೇ ಘಾಸಿ ಮಾಡುತ್ತಿದ್ದಾರೆ. ಯತ್ನಾಳ್ ಮತ್ತು ಅವರ ತಂಡದ ವಿರುದ್ಧ ಕೇಂದ್ರ ನಾಯಕತ್ವ ಏಕೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ? ಬಹಿರಂಗ ಮಾಧ್ಯಮ ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕವಾಗಿ ಪಕ್ಷದ ಅಧ್ಯಕ್ಷರ ಪ್ರತಿಷ್ಠೆಯನ್ನು ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದ ಘನತೆ, ವಿಶ್ವಾಸಾರ್ಹತೆ ಮತ್ತು ಹಿತದೃಷ್ಟಿಯಿಂದ ಕೂಡಲೇ ಮಧ್ಯಪ್ರವೇಶಿಸಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕಾಗಿ ವಿನಂತಿಕೊಳ್ಳುತ್ತೇವೆ. ಕಾರ್ಯಕರ್ತರ ನೈತಿಕ ಸ್ಥೈರ್ಯದ ಹಿತದೃಷ್ಟಿಯಿಂದ ಇದನ್ನು ತುರ್ತು ಆಧಾರದ ಮೇಲೆ ಪರಿಗಣಿಸಲು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಬಿಜೆಪಿ ನಾಯಕರ ಒತ್ತಾಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್‌ಗೆ ಶಾಕ್ ನೀಡಿದಂತಾಗಿದೆ. ನಿಮ್ಮ ಭಾವನೆಗಳನ್ನು ಹೈಕಮಾಂಡ್‌ಗೆ ತಿಳಿಸುತ್ತೇನೆ. ನಿಮ್ಮ ಅಭಿಪ್ರಾಯಗಳನ್ನು ವರಿಷ್ಠರ ಗಮನಕ್ಕೆ ತರುತ್ತೇನೆ. ಆದರೆ ಈಗ ನಾನು ಸಂಘಟನಾತ್ಮಕ ವಿಚಾರಕ್ಕಾಗಿ ಬಂದಿದ್ದೇನೆ. ಸಂಘಟನೆ, ಪಕ್ಷದ ಬಲವರ್ಧನೆ ಆಗಬೇಕು. ಇವತ್ತಿನ ಸಭೆಗಳು ಸಂಘಟನೆ ಪರ್ವ, ಸದಸ್ಯತ್ವ ಅಭಿಯಾನಕ್ಕೆ ಮಾತ್ರ ಸೀಮಿತಾವಗಿದೆ. ಹೀಗಾಗಿ ಈ ವೇದಿಕೆಯಲ್ಲಿ ಚರ್ಚೆ ಬೇಡ ಎಂದು ಮನವಿ ಮಾಡಿಕೊಂಡರು. ಜೆಪಿ ನಡ್ಡಾಗೆ ನೀಡಿದ ಪತ್ರವನ್ನು ಸ್ವೀಕರಿಸದೇ ಕೇವಲ ನಾಯಕರ ಮನವಿ ಆಲಿಸಿ ಹೈಕಮಾಂಡ್ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ವಿಜಯೇಂದ್ರ (BY Vijayendra), ಸಿ.ಟಿ ರವಿ (CT Ravi), ಛಲವಾದಿ ನಾರಾಯಣಸ್ವಾಮಿ, (Chalavadi Narayanaswamy) ಆರ್.ಅಶೋಕ್ (R Ashok), ಸುನೀಲ್ ಕುಮಾರ್ (Sunil Kumar), ರಾಜ್ಯ ಪದಾಧಿಕಾರಿಗಳು ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದರು.ಇದನ್ನೂ ಓದಿ: ಬಿಜೆಪಿಯನ್ನು ವಿಜಯೇಂದ್ರ ಚೇಲಾಗಳು ನಡೆಸ್ತಿದ್ದಾರೆ: ಬಿ.ಪಿ ಹರೀಶ್ ಕಿಡಿ