ಮಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಯಲಹಂಕ ಟ್ರೈನಿಂಗ್ ಸೆಂಟರ್‍ಗೆ ಮಧುಕರ್ ಶೆಟ್ಟಿ ಹೆಸರು ಇಡಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 13 ಶಾಸಕರು ಮತ್ತು ಇಬ್ಬರು ಸಂಸದರಿದ್ರೂ ಮಧುಕರ್ ಶೆಟ್ಟಿ ಪಾರ್ಥಿವ ಶರೀರ ನೋಡಲು ಯಾರೂ ಹೋಗಿಲ್ಲ.
ಶನಿವಾರ ರಾತ್ರಿ ಮಂಗಳೂರಿಗೆ ಪಾರ್ಥಿವ ಶರೀರ ತಲುಪುತ್ತಿದ್ದಂತೆಯೇ 1 ಗಂಟೆ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಯ್ತು. ಈ ವೇಳೆ ಸಚಿವ ಯು.ಟಿ.ಖಾದರ್, ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್ ಲೋಬೊ, ಅಭಯಚಂದ್ರ ಜೈನ್ ಮತ್ತಿತರ ಕಾಂಗ್ರೆಸ್ ನಾಯಕರು ಆಗಮಿಸಿ ಅಂತಿಮ ದರ್ಶನ ಪಡೆದ್ರು. ಆದ್ರೆ ಬಿಜೆಪಿಯವ್ರು ಮಾತ್ರ ಒಬ್ಬರೂ ಅತ್ತ ಸುಳಿಯಲೇ ಇಲ್ಲ. ಇದನ್ನೂ ಓದಿ: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆಗೆ ಕುಂದಾಪುರದಲ್ಲಿ ಸಿದ್ಧತೆ
ಅನಾರೋಗ್ಯದಿಂದ ನಿಧನರಾದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರ ರಾತ್ರಿ ಮಂಗಳೂರಿನಿಂದ ಉಡುಪಿಗೆ ಶಿಫ್ಟ್ ಆಗಿದೆ. ಇಂದು ಬೆಳಗ್ಗೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, 10 ಗಂಟೆಗೆ ಯಡಾಡಿ ಮನೆಯ ಅಡಿಕೆ ತೋಟದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯಲಿದೆ. ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಚಿತೆ ಸಿದ್ಧಪಡಿಸಲಾಗುತ್ತಿದ್ದು, ಅಂತ್ಯಕ್ರಿಯೆಯಲ್ಲಿ ಡಿಜಿಪಿ ನೀಲಮಣಿ ರಾಜು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
https://www.youtube.com/watch?v=umjUL4BMlBc
https://www.youtube.com/watch?v=N0HUyHwmEMk
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv