ಚಿತ್ರದುರ್ಗ: ಬಿಜೆಪಿಯವರಿಗೆ ನನ್ನ ಕಂಡರೆ ಭಯ. ಶತ್ರುಗಳಿದ್ದಷ್ಟೂ ನಾವು ಬಲಶಾಲಿಗಳಾಗ್ತೀವಿ ಎಂದು ಬಿಜೆಪಿ (BJP) ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗುಡುಗಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಂಡಿದ್ದ ವೇಳೆ ಮಾತನಾಡಿದ ಅವರು, ಶತ್ರುಗಳಿದ್ದಷ್ಟು ಹೆಚ್ಚು ಬಲಶಾಲಿಗಳಾಗುತ್ತೇವೆ. ಕಡಿಮೆ ಶತ್ರುಗಳಿದ್ದರೆ ಕಡಿಮೆ ಬಲಶಾಲಿಗಳಾಗುತ್ತೇವೆ. ಶತ್ರುಗಳು ಇಲ್ಲದಿದ್ದರೆ ಬಲಶಾಲಿಗಳಾಗಲ್ಲ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ 80 ಸ್ಥಾನ ಗಳಿಸಿದ್ರೆ ನನ್ನ ಬೆರಳು ಕತ್ತರಿಸಿ ಕೊಡುತ್ತೇನೆ: ಶಿವನಗೌಡ ನಾಯಕ
Advertisement
Advertisement
ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಭಯದಿಂದ ಮಾತಾಡುತ್ತಿದ್ದಾರೆ. ಅದಕ್ಕೆಲ್ಲ ಉತ್ತರ ಕೊಡಕ್ಕಾಗುತ್ತಾ? ಏನಾದ್ರೂ ಸಮಸ್ಯೆ ಇಟ್ಟುಕೊಂಡು ಮಾತನಾಡಬೇಕಲ್ಲವಾ? ಭ್ರಷ್ಟಾಚಾರ ವ್ಯಾಪಕವಾಗಿದ್ದು, ಅದರ ಬಗ್ಗೆ ಚರ್ಚೆ ಮಾಡಬೇಕು. ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಬಾರದು. ಜನರ ಸೇವೆ ಮಾಡೋದಲ್ವಾ ರಾಜಕಾರಣ ಅಂದ್ರೆ. ನನ್ನ ಕಂಡರೂ ಭಯ ಅವರಿಗೆ. ಎಲ್ಲ ವಿಷಯದಲ್ಲೂ ಭಯ ಇದೆ ಅವರಿಗೆ ಎಂದು ಲೇವಡಿ ಮಾಡಿದ್ದಾರೆ.
Advertisement
ನಮ್ಮಲ್ಲಿ ಹೊಂದಾಣಿಕೆ ಇಲ್ಲ ಅಂತಾರೆ. ಅವರಲ್ಲಿ ಹೊಂದಾಣಿಕೆ ಇದೆಯಾ? ಯತ್ನಾಳ್, ವಿಶ್ವನಾಥ್ ಅವರು ಬಾಯಿಗೆ ಬಂದಂತೆ ಮಾತಾಡ್ತಾರೆ. ಯಡಿಯೂರಪ್ಪ ಮಗನೇ ಸಬ್ ಇನ್ಸ್‌ಪೆಕ್ಟರ್ ಹಗರಣದಲ್ಲಿ ಪಾಲುದಾರ ಅಂತ ಯತ್ನಾಳ್ ಹೇಳಿಲ್ವಾ? ಭಂಡರಿಗೆ ಏನು ಒತ್ತಡ ಹಾಕೋದು. ಯಡಿಯೂರಪ್ಪ ಇಲ್ಲದೆ ಇವರಿಗೆ ಪ್ರಚಾರಕ್ಕೆ ಹೋಗಕ್ಕಾಗಲ್ಲ. ಯಡಿಯೂರಪ್ಪ ಬಿಟ್ಟರೆ ಲೀಡರ್ ಶಿಪ್ ಇಲ್ಲ ಬಿಜೆಪಿಯವರಿಗೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವಧಿಯಲ್ಲಿ ಶಾಲಾ-ಕಾಲೇಜುಗಳಲ್ಲಿಯೇ ಡ್ರಗ್ಸ್ ಸಿಗ್ತಿತ್ತು: ಕಟೀಲ್
Advertisement
ರಾಹುಲ್ ಪಾದಯಾತ್ರೆ ಡ್ರಾಮಾ ಎಂಬ ಶ್ರೀರಾಮುಲು ಟೀಕೆ ಕುರಿತು ಪ್ರತಿಕ್ರಿಯಿಸಿ, ಶ್ರೀರಾಮುಲುಗೆ ಯಾವಾಗಲೂ ಹೋರಾಟ ಚಳವಳಿ ಮಾಡಿ ಗೊತ್ತಿಲ್ಲ. ಶ್ರೀರಾಮುಲು ಹೆಸರು ಏಕೆ ಹೇಳ್ತೀರಿ? ರಾಮುಲು, ರೆಡ್ಡಿ ಬ್ರದರ್ಸ್ ಜೊತೆ ಬಂದಿದ್ದು. ಬಳ್ಳಾರಿಯಿಂದ ಮುಂದೆ ಹೋಗ್ತೀವಿ, ಎಲ್ಲ ಹೊಸ ದಿನಗಳೇ ಎಂದು ಕುಟುಕಿದ್ದಾರೆ.