ಬೆಂಗಳೂರು: ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ನಾಯಕರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಸದ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ನಾಯಕರು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರೊಫೈಲ್ ಪಿಕ್ (Profile Pic) ಬದಲಾಯಿಸಿಕೊಂಡಿದ್ದಾರೆ. ನಾನೂ ರಾಮಭಕ್ತ ನನ್ನನ್ನು ಬಂಧಿಸಿ ಸಿದ್ದರಾಮಯ್ಯನವರೇ (Siddaramaiah) ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.
ಹುಬ್ಬಳ್ಳಿ ಕರಸೇವಕನ (Hubballi Karasevaka) ಬಂಧನ ಬೆನ್ನಲ್ಲೇ ಈಗ ಸಾಮಾಜಿಕ ಜಾಲತಾಣದಲ್ಲಿ ರಾಮ ಹನುಮ ಪೋಸ್ಟರ್ ಜೊತೆಗೆ ನಾನು ರಾಮಭಕ್ತ ನನ್ನನ್ನು ಬಂಧಿಸಿ ಸಿದ್ದರಾಮಯ್ಯನವರೇ ಅಂತಾ ಪೋಸ್ಟರ್ ವೈರಲ್ ಆಗುತ್ತಿದೆ. ಬಿಜೆಪಿ ಮುಖಂಡರು ಸೇರಿದಂತೆ ಹಿಂದೂ ಸಂಘಟನೆಗಳಿಂದ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಈ ಮೂಲಕ ಕರಸೇವಕನ ಬಂಧನದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ತಮ್ಮ ಪ್ರೊಫೈಲ್ ಪಿಕ್ ಬದಲಾವಣೆ ಮಾಡಿರುವ ಬಿಜೆಪಿ ನಾಯಕರು ಶ್ರೀರಾಮಚಂದ್ರನ ಫೋಟೋವಿರುವ ಚಿತ್ರವನ್ನು ಹಾಕಿಕೊಂಡಿದ್ದಾರೆ. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!